ಐತಿಹಾಸಿಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್; ಪ್ರಿಯಾಂಶ್ ಆರ್ಯಗೆ ಪ್ರೀತಿಯಿಂದ 'ಪಂಚ್' ಮಾಡಿದ ಪ್ರೀತಿ ಜಿಂಟಾ; ರವಿಶಾಸ್ತ್ರಿ ಪ್ರತಿಕ್ರಿಯೆ
ಈ ಐತಿಹಾಸಿಕ ಗೆಲುವಿನ ನಂತರ ಪಿಬಿಕೆಎಸ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ ಮೈದಾನಕ್ಕೆ ಬಂದು ವಿಜೇತ ತಂಡವನ್ನು ಅಭಿನಂದಿಸಿದರು.
ಶನಿವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆರು ವಿಕೆಟ್ಗಳ ಜಯ ಸಾಧಿಸುವ ಮೂಲಕ ಇತಿಹಾಸ ಬರೆದಿದೆ. ಪಿಬಿಕೆಎಸ್ ತಂಡವು 265 ರನ್ಗಳ ಗುರಿಯನ್ನು ಬೆನ್ನಟ್ಟಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ಚೇಸಿಂಗ್ ಮಾಡಿದೆ. ಈ ಮೂಲಕ ಟೂರ್ನಿಯಲ್ಲಿ ಪಂಜಾಬ್ ತಂಡ ಸೋಲು ಕಾಣದೆಯೇ ತನ್ನ ಓಟವನ್ನು ಮುಂದುವರಿಸಿದೆ. ಪ್ರಭ್ಸಿಮ್ರನ್ ಸಿಂಗ್ (26 ಎಸೆತಗಳಲ್ಲಿ 76) ಮತ್ತು ಪ್ರಿಯಾಂಶ್ ಆರ್ಯ (17 ಎಸೆತಗಳಲ್ಲಿ 43) ಪಂಜಾಬ್ ತಂಡಕ್ಕೆ ಅದ್ಭುತ ಆರಂಭ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ ಅಜೇಯ 71 ಗಳಿಸುವ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಿಬಿಕೆಎಸ್ ತಂಡವು ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು.
ಈ ಐತಿಹಾಸಿಕ ಗೆಲುವಿನ ನಂತರ ಪಿಬಿಕೆಎಸ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ ಮೈದಾನಕ್ಕೆ ಬಂದು ವಿಜೇತ ತಂಡವನ್ನು ಅಭಿನಂದಿಸಿದರು.
ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರೊಂದಿಗಿನ ಸಂವಾದದ ಸಮಯದಲ್ಲಿ, ಪ್ರೀತಿ ಜಿಂಟಾ ಅವರು ಆಟಗಾರನಿಗೆ 'ಪಂಚ್' ನೀಡಿದರು ಮತ್ತು ಅದಕ್ಕೆ ಪ್ರಿಯಾಂಶ್ ಆರ್ಯ ಕೂಡ ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ರವಿಶಾಸ್ತ್ರಿ, 'ಓಹ್, ಅದು ಒಳ್ಳೆಯ ಪಂಚ್ ಆಗಿತ್ತು' ಎಂದು ಹೇಳಿದರು.
ಈ ಗೆಲುವಿನೊಂದಿಗೆ, ಪಂಜಾಬ್ ಕಿಂಗ್ಸ್ ಐಪಿಎಲ್ 2026ನೇ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಪಂಜಾಬ್ ತಂಡವು ಆಡಿರುವ ಏಳು ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ ಮತ್ತು ಒಂದು ಪಂದ್ಯವು ಮಳೆಯಿಂದ ರದ್ದಾಗಿತ್ತು. ಈಮೂಲಕ 13 ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆಎಲ್ ರಾಹುಲ್ ಅಜೇಯ 152 ರನ್ ನೆರವಿನೊಂದಿಗೆ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 264 ರನ್ ಗಳಿಸಿತು. ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್ಗಳ ಸಹಾಯದಿಂದ 152 ರನ್ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಒಟ್ಟಾರೆಯಾಗಿ, ರಾಹುಲ್ ಅವರ ಈ ಇನಿಂಗ್ಸ್ ಕ್ರಿಸ್ ಗೇಲ್ ಅವರ 175 ನಾಟೌಟ್ ಮತ್ತು ಬ್ರೆಂಡನ್ ಮೆಕಲಮ್ ಅವರ 158 ರನ್ಗಳ ನಂತರ ಮೂರನೇ ಸ್ಥಾನದಲ್ಲಿದೆ.
ನಿತೀಶ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿ ಡಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ಅವರ ಇನಿಂಗ್ಸ್ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳಿಂದ ಕೂಡಿತ್ತು. ಅವರು ಮತ್ತು ರಾಹುಲ್ 95 ಎಸೆತಗಳಲ್ಲಿ 220 ರನ್ಗಳ ಜೊತೆಯಾಟವಾಡಿದರು.
ಈ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಭ್ಸಿಮ್ರನ್ ಮತ್ತು ಪ್ರಿಯಾಂಶ್ ಕೇವಲ 6.5 ಓವರ್ಗಳಲ್ಲಿ 126 ರನ್ಗಳ ಜೊತೆಯಾಟ ನಡೆಸಿ ಭರ್ಜರಿ ಅಡಿಪಾಯ ಹಾಕಿದರು. ನಂತರ ಶ್ರೇಯಸ್ ಅಯ್ಯರ್ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


