ಕ್ರಿಕೆಟ್

Scared, Dubba Captaincy: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ತೀವ್ರ ಟೀಕೆಗೆ ಗುರಿ!

ಆರಂಭಿಕ ಪಂದ್ಯವನ್ನು ಹೊರತುಪಡಿಸಿ, ಮುಂಬೈ ತಂಡ ಈ ಬಾರಿ ಯಾವುದೇ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿಲ್ಲ. ಇದು ಹಾರ್ದಿಕ್ ಪಾಂಡ್ಯ ಅವರ ಡಬ್ಬಾ ನಾಯಕತ್ವ ಅಂತಾ ಶ್ರೀಕಾಂತ್ ಕಿಡಿಕಾರಿದ್ದಾರೆ.

Scared, Dubba Captaincy: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ತೀವ್ರ ಟೀಕೆಗೆ ಗುರಿ!
ಹಾರ್ದಿಕ್ ಪಾಂಡ್ಯ
Published On :

ಮುಂಬೈ: ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದೆ. ಟೂರ್ನಿ ಆರಂಭವಾದಾಗಿನಿಂದ ಆಡಿದ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಸೋತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ತಂಡ ಅಭಿಮಾನ ಆರಂಭಿಸಿತ್ತು. ಆದರೆ ತದನಂತರ ಹಳಿ ತಪ್ಪಿದೆ.

ನಂತರ ಮುಂಬೈ ಸತತ ನಾಲ್ಕು ಪಂದ್ಯಗಳನ್ನು ಸೋತಿತು. ಗುಜರಾತ್ ಟೈಟಾನ್ಸ್ ವಿರುದ್ಧ 99 ರನ್‌ಗಳ ದೊಡ್ಡ ಗೆಲುವಿನೊಂದಿಗೆ ಮುಂಬೈ ಲಯಕ್ಕೆ ಬರುತ್ತಿದೆ ಅಂದುಕೊಳ್ಳುತ್ತಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಂಡ 103 ರನ್‌ಗಳ ಭಾರೀ ಅಂತರದಿಂದ ಸೋತಿದೆ.

ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಎರಡು ಓವರ್‌ಗಳಲ್ಲಿ 38 ರನ್ ಚಚ್ಚಿಸಿಕೊಂಡರು. ಪರಿಣಾಮ ಅವರು ಸ್ಲಾಗ್ ಓವರ್‌ಗಳಲ್ಲಿ ಬೌಲಿಂಗ್ ಮಾಡಲಿಲ್ಲ ಮತ್ತು ಬದಲಿಗೆ 21 ವರ್ಷದ ಯುವ ಆಟಗಾರ ಕ್ರಿಶ್ ಭಗತ್‌ಗೆ ಬೌಲಿಂಗ್ ನೀಡಿದರು. ಅವರು ತನ್ನ ಎರಡು ಓವರ್ ಗಳಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟರು, ಇದು ಹಾರ್ದಿಕ್ ಪಾಂಡ್ಯ ಅವರನ್ನು ಟೀಕೆಗಳಿಗೆ ಗುರಿಯಾಗಿಸಿದೆ.

ಬೌಲಿಂಗ್ ಸಾಮರ್ಥ್ಯದ ಬಗ್ಗೆ ನಂಬಿಕೆಯಿಲ್ಲದಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತರಾಟೆಗೆ ತೆಗೆದುಕೊಂಡಿದ್ದಾರೆ. ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದ್ದಕ್ಕಾಗಿ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಡೆತ್ ಓವರ್‌ಗಳನ್ನು ಬೌಲ್ ಮಾಡಿದ ಆಟಗಾರ ಇಲ್ಲಿಯೂ ಅದೇ ರೀತಿ ಬೌಲಿಂಗ್ ಮಾಡಲು ಹೆದರುತ್ತಾರೆ. ಮುಂಬೈ ತಂಡದ ಸಮಸ್ಯೆ ಇಲ್ಲಿಂದಲೇ ಆರಂಭವಾಗುತ್ತದ. ಅದಕ್ಕಾಗಿಯೇ ಟಾಸ್ ಗೆದ್ದ ನಂತರ ನೀವು ಮೊದಲು ಬ್ಯಾಟಿಂಗ್ ಮಾಡಬೇಕು. ಕಳೆದ ಪಂದ್ಯದಲ್ಲಿ ತಿಲಕ್ ವರ್ಮಾ ಅಥವಾ ಇಂದಿನ ಸಂಜು ಸ್ಯಾಮ್ಸನ್‌ರಂತೆ ಒಂಟಿಯಾಗಿ ವೀರೋಚಿತ ಪ್ರದರ್ಶನ ನೀಡುವ ಅವಕಾಶವಿದೆ. ಹಾರ್ದಿಕ್ ಪಾಂಡ್ಯ ಕೂಡ ಅದನ್ನು ತಪ್ಪಾಗಿ ಭಾವಿಸಿದ್ದಾರೆ" ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಆರಂಭಿಕ ಪಂದ್ಯವನ್ನು ಹೊರತುಪಡಿಸಿ, ಮುಂಬೈ ತಂಡ ಈ ಬಾರಿ ಯಾವುದೇ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿಲ್ಲ. ಇದು ಹಾರ್ದಿಕ್ ಪಾಂಡ್ಯ ಅವರ ಡಬ್ಬಾ ನಾಯಕತ್ವ. ಟಾಸ್ ಗೆದ್ದ ನಂತರ ಅವರು ಮೊದಲು ಬ್ಯಾಟಿಂಗ್ ಮಾಡಬೇಕಿತ್ತು. ಕೆಕೆಆರ್ ಪಂದ್ಯವನ್ನು ಹೊರತುಪಡಿಸಿ, ಅವರು ಯಾವಾಗಲೂ ಸೋತಿದ್ದಾರೆ. 20 ವಿಶ್ವಕಪ್‌ಗಳಲ್ಲಿ ಡೆತ್ ಓವರ್‌ಗಳನ್ನು ಬೌಲ್ ಮಾಡಿದ ಪ್ರಮುಖ ಬೌಲರ್. ಆದರೂ, ನೀವು ಬೌಲಿಂಗ್ ಮಾಡಲು ಬರುತ್ತಿಲ್ಲ ಮತ್ತು ಆ ಹುಡುಗ ಕ್ರಿಶ್ ಭಗತ್‌ಗೆ ಕೊನೆಯ ಎರಡು ಓವರ್‌ಗಳನ್ನು ಬೌಲ್ ಮಾಡಲು ಕೊಡಲಾಗುತ್ತಿದೆ. ಹಾರ್ದಿಕ್ ರನ್ ಪಡೆಯಲು ಕಷ್ಟಪಡುತ್ತಿದ್ದಾರೆ ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.