Thala: ಸಹಾಯಕ ಸಿಬ್ಬಂದಿ ಬಿಟ್ಟುಕೊಡದೆ ಮತ್ತೆ ಅಭಿಮಾನಿಗಳ ಹೃದಯ ಗೆದ್ದ ಮಹೇಂದ್ರ ಸಿಂಗ್ ಧೋನಿ! Video
ಇತ್ತೀಚಿನ ಚೆನ್ನೈ ಸೂಪರ್ ಕಿಂಗ್ಸ್ (CSK) ತರಬೇತಿ ಅವಧಿಯಲ್ಲಿನ ಹೃದಯಸ್ಪರ್ಶಿ ವೀಡಿಯೊವೊಂದು ವೈರಲ್ ಆಗಿದ್ದು, "ಥಾಲ" ತನ್ನ ಕ್ರಿಕೆಟ್ ಪ್ರತಿಭೆ ಮೀರಿ ಯಾಕೆ ಪ್ರೀತಿಯ ವ್ಯಕ್ತಿಯಾಗಿ ಉಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ.

ಚೆನ್ನೈ: ಆಡುವ ಹನ್ನೊಂದರ ತಂಡದಿಂದ ಹೊರಗುಳಿದಿದ್ದರೂ csk ತಂಡದ ಎಂಎಸ್ ಧೋನಿ ಮೈದಾನದ ಹೊರಗೆ ತೋರುವ ವಿನಯತೆ, ಹೃದಯ ವೈಶಾಲತೆಯಿಂದ ಪದೇ ಪದೇ ಅಭಿಮಾನಿಗಳ ಹೃದಯಗಳನ್ನು ಗೆಲ್ಲುತ್ತಲೇ ಇದ್ದಾರೆ.
ಇತ್ತೀಚಿನ ಚೆನ್ನೈ ಸೂಪರ್ ಕಿಂಗ್ಸ್ (CSK) ತರಬೇತಿ ಅವಧಿಯಲ್ಲಿನ ಹೃದಯಸ್ಪರ್ಶಿ ವೀಡಿಯೊವೊಂದು ವೈರಲ್ ಆಗಿದ್ದು, "ಥಾಲ" ತನ್ನ ಕ್ರಿಕೆಟ್ ಪ್ರತಿಭೆ ಮೀರಿ ಯಾಕೆ ಪ್ರೀತಿಯ ವ್ಯಕ್ತಿಯಾಗಿ ಉಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ.
ಅಭ್ಯಾಸದ ಅವಧಿಯಲ್ಲಿ ಧೋನಿಯನ್ನು ಸೆರೆ ಹಿಡಿಯಲು ಪ್ರಯತ್ನಿಸುವ ಕ್ಯಾಮೆರಾಮನ್, ಅವರಿಂದ ದೂರ ಸರಿಯುವಂತೆ ಸಹಾಯಕ ಸಿಬ್ಬಂದಿಯನ್ನು ಕೇಳುತ್ತಾರೆ. ಇದನ್ನು ಕೇಳಿಸಿಕೊಂಡ ಧೋನಿ, ಸಹಾಯಕ ಸಿಬ್ಬಂದಿಯನ್ನು ಪಕ್ಕಕ್ಕೆ ಕರೆದುಕೊಂಡು ಹೆಗಲ ಮೇಲೆ ಕೈ ಹಾಕಿ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಹೌದು. ಹಿಂಬದಿಯಿಂದ ಬರುವ ಕ್ಯಾಮರಾಮ್ಯಾನ್ ಸ್ವಲ್ಪ ಹಿಂದೆ ಸರಿಯಬಹುದೇ ನಾನು ಮಹಿಯನ್ನು ಸರಿಯಾಗಿ ಸೆರೆಹಿಡಿಯಬೇಕು ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಎಂಎಸ್ ಧೋನಿ, ಇಲ್ಲ... ಇಲ್ಲೇ ಇರಿ. ಬೇರೆಯವರ ಮಾತನ್ನು ಕೇಳಬೇಡಿ ಎಂದು ಸಹಾಯಕ ಸಿಬ್ಬಂದಿಯನ್ನು ಕರೆದು ಅವರ ಹೆಗೆಲ ಮೇಲೆ ಕೈ ಹಾಕಿ ಕರೆದುಕೊಂಡು ಹೋಗಿದ್ದಾರೆ.
ತನನ್ನು ಸಂಪೂರ್ಣವಾಗಿ ಸೆರೆಹಿಡಿಯಲು ಪ್ರಯತ್ನಿಸುತ್ತಿರುವ ಕ್ಯಾಮರಾಮ್ಯಾನ್ ಗೆ ಫೋಸ್ ಕೊಡುವುದರ ಬದಲು ತನ್ನ ಸಹಾಯಕ ಸಿಬ್ಬಂದಿಗೆ ಆದ್ಯತೆ ನೀಡುವ ಅನುಭವಿ ಆಟಗಾರನ ದೃಢ ಮತ್ತು ಕರುಣೆಯ ನಿಲುವು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಪ್ರಶಂಸೆಯನ್ನು ಹುಟ್ಟುಹಾಕಿದೆ. ಅಭಿಮಾನಿಗಳು ಇದನ್ನು ಅಹಂಕಾರ ಇಲ್ಲದ ಹೃದಯ ವೈಶಾಲ್ಯತೆ ಗುಣ ಎಂದು ಹೊಗಳುತ್ತಿದ್ದಾರೆ.
ಗಾಯದ ಸಮಸ್ಯೆಯಿಂದ ಐಪಿಎಲ್ ಪಂದ್ಯಗಳಿಂದ ದೂರ ಇರುವ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಡಲಿದ್ದಾರೆ ಎಂಬುದು ಮೂಲಗಳು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



