IPL 2026: ಇಲ್ಲಿಯವರೆಗೂ ನೋಡಿರದ RCBಯ funniest moment; ವಿಡಿಯೋ ವೈರಲ್
ಪಂದ್ಯದ ಟೆನ್ಷನ್ ಹೆಚ್ಚಾಗಿದ್ದಾಗ ಡ್ರಿಂಕ್ ಬ್ರೇಕ್ ನಲ್ಲಿ ಇದು ನಡೆದಿದೆ. ದಿನೇಶ್ ಕಾರ್ತಿಕ್, RCB ಅಂಪೈರ್ ಗಳು ಹಾಗೂ ಅಧಿಕಾರಿಗಳು ನಡುವಿನ ಕಾಮಿಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಬೆಂಗಳೂರು: ನಗರದ M.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ RCB vs CSK ಪಂದ್ಯ ಒಂದೊಳ್ಳೆ ಹಾಸ್ಯದ ಕ್ಷಣಕ್ಕೆ ಸಾಕ್ಷಿಯಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಡ್ರಿಂಕ್ ಬ್ರೇಕ್ ವೇಳೆ ದಿನೇಶ್ ಕಾರ್ತಿಕ್, RCB ಅಂಪೈರ್ ಗಳು ಹಾಗೂ ಅಧಿಕಾರಿಗಳು ನಡುವಿನ ಕಾಮಿಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಿರಿಯ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್, "ಡ್ರಿಂಕ್ಸ್ ಮ್ಯಾನ್" ಆಗಿ ಕಾರ್ಯನಿರ್ವಹಿಸಿದ್ದು, ಬ್ಯಾಟರ್ ಗಳಾದ ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ಅವರಿಗೆ ನೀರನ್ನು ನೀಡಲು ಪಿಚ್‌ಗೆ ಓಡಿದಾಗ ಈ ಕಾಮಿಡಿ ನಡೆದಿದೆ.
ಆಗ ಪಾಟಿದಾರ್ ಅಥವಾ ಪಡಿಕ್ಕಲ್ ಬಾಟಲ್ ಪಡೆಯುವ ಮುನ್ನಾ ಅಧಿಕಾರಿ ಬಾಟಲಿ ಕಿತ್ತುಕೊಂಡು ನೀರು ಕುಡಿದು ಬಿಟ್ಟಿದ್ದಾರೆ. ಇದರಿಂದ ಕೊಂಚ ಬೇಸರಗೊಂಡಂತೆ ಕಂಡುಬಂದ ರಜತ್ ಪಾಟಿದಾರ್, ನೀರಿನ ಬಾಟಲಿ ಇಲ್ಲದಿರುವುದಕ್ಕೆ ಅಂಪೈರ್ ಜೊತೆಗೆ ಮಾತನಾಡಿದ್ದಾರೆ.
ಏನಾಗುತ್ತಿದೆ ಎಂದು ಆಟಗಾರರು ಪಾಟಿದಾರ್ ಸುತ್ತ ನೆರೆದಿದ್ದಾರೆ. ಬಳಿಕ ಕೂಡಲೇ ಅಂಪೈರ್ ನೀರಿನ ಬಾಟಲ್ ಕೊಟ್ಟಿದ್ದಾರೆ. ಆದರೆ, ಅಷ್ಟರಾಗಲೇ ಎಲ್ಲ ಡ್ಯಾಮೇಜ್ ನಡೆದಿತ್ತು.
ಪಿಚ್ ನಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದರಿಂದ ಆರ್ ಸಿಬಿ ಮುಖ್ಯ ತರಬೇತುದಾರ ಆ್ಯಂಡಿ ಪ್ಲವರ್ ಕೂಡಾ ಕಾಣಿಸಿಕೊಂಡಿದ್ದಾರೆ. ಆದರೆ ಏನು ಮಾತನಾಡಿದರು ಎಂಬುದು ಸ್ಪಷ್ಟವಾಗಿ ಕೇಳುತ್ತಿಲ್ಲ. ಆದರೆ ಪಾಟಿದಾರ್ ಬಾಡಿ ಲಾಂಗ್ವೆಂಜ್ ಎಲ್ಲಾವನ್ನೂ ಹೇಳುತ್ತಿದೆ.
ಅಂಪೈರ್ ಕಡೆಗೆ ಬರುವ ಪಾಟಿದಾರ್ ("hydration) ಕಳುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುವುದು ಕಂಡುಬಂದಿದೆ.
ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, IPL 2026 ರಲ್ಲಿ ಇಲ್ಲಿಯವರೆಗೂ ನೋಡಿರದ ಅತ್ಯಂತ ಕಾಮಿಡಿ ದೃಶ್ಯ ಎಂದು ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


