IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕು ಸಿಂಗ್! Video
ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಈ ಮಹಾ ಯಡವಟ್ಟಿನಿಂದ ಪಂದ್ಯವೇ ಕೈ ಜಾರಿತು.

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸನ್ ರೈಸರ್ಸ್ ವಿರುದ್ದದ ಪಂದ್ಯದಲ್ಲಿ ಅಂಗ್ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 52 ರನ್ ಬಾರಿಸಿ ಕೆಕೆಆರ್ ಪರ ಉತ್ತಮ ಪ್ರದರ್ಶನ ತೋರಿದರು.
ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಈ ಮಹಾ ಯಡವಟ್ಟಿನಿಂದ ಪಂದ್ಯವೇ ಕೈ ಜಾರಿತು.
ಹೌದು. 11ನೇ ಓವರ್ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಅವರು ಬ್ಯಾಕ್ವರ್ಡ್ ಪಾಯಿಂಟ್ನತ್ತ ಚೆಂಡನ್ನು ತಳ್ಳಿದರು. ಆದರೆ, ಓಡಲಿಲ್ಲ. ಆಗ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಇಶಾನ್ ಮಲಿಂಗ್ ಅವರು ಚೆಂಡನ್ನು ಶಿವಂಗ್ ಕುಮಾರ್ ಗೆ ಎಸೆದರು.
ನಾನ್ ಸ್ಟ್ರೈಕರ್ ಆಂಡ್ನಲ್ಲಿ ಅಂಗ್ಕ್ರಿಶ್ ರಘುವಂಶಿ ಸಿಂಗಲ್ ರನ್ ಕದಿಯಲು ಹೋದರು. ಆದರೆ ಶಿವಂಗ್ ಚೆಂಡನ್ನು ಹಿಡಿದು ರನೌಟ್ ಮಾಡಿದರು. ಇದರಿಂದಾಗಿ ರಿಂಕ್ ಸಿಂಗ್ ಸಿಟ್ಟಾದರು. ಮತ್ತೊಂದೆಡೆ ಸನ್ರೈಸರ್ಸ್ನತ್ತ ಗೆಲುವಿನ ಹಾದಿ ಸುಗಮವಾಯಿತು.
ನಂತರ ಬಂದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಕೆಕೆಆರ್ 16 ಓವರ್ಗಳಲ್ಲಿ 161 ರನ್ ಸೇರಿಸುವುದರೊಂದಿಗೆ ಎರಡನೇ ಬಾರಿಗೆ ಸೋಲಿಗೆ ಶರಣಾಯಿತು. ಈ ಹಿಂದೆ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



