ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ನಂತರ ಪೃಥ್ವಿ ಶಾ ಯೂಟರ್ನ್; ಇನ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್!
ಈ ವರ್ಷದ ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಗಳಿಸಿದ ಪೃಥ್ವಿ ಶಾ, 2018 ರಿಂದ 2024 ರವರೆಗೆ ತಾವು ಆಡಿದ ಫ್ರಾಂಚೈಸಿಗೆ ಮರಳಿದ್ದಕ್ಕಾಗಿ ತಮ್ಮ ಆಶ್ಚರ್ಯವನ್ನು ಇತ್ತೀಚಿನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಅಬುದಾಬಿಯಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಹರಾಜಿನಲ್ಲಿ ಆರಂಭದಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗದ ಬಗ್ಗೆ ಭಾರತದ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸಾಮಾಜಿಕ ಮಾಧ್ಯಮದಲ್ಲಿ ಹಾರ್ಟ್‌ಬ್ರೇಕ್ ಆದ ಬಗ್ಗೆ ಪೋಸ್ಟ್ ಮಾಡಿದ್ದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಡವಾಗಿ ಅವರನ್ನು ತಮ್ಮ ತಂಡಕ್ಕೆ ಖರೀದಿಸಿದ ನಂತರ ಆ ಪೋಸ್ಟ್ ಅನ್ನು ಅಳಿಸಿದ್ದಾರೆ. ಆರಂಭಿಕ ಅವಧಿಯಲ್ಲಿ 75 ಲಕ್ಷ ರೂ. ಮೂಲ ಬೆಲೆಗೆ ಮಾರಾಟವಾಗದ ನಂತರ, ಶಾ ಅವರ ಹೆಸರು ನಂತರ ರ್ಯಾಪಿಡ್ ಹರಾಜಿನಲ್ಲಿ ಕಾಣಿಸಿಕೊಂಡಿತು. ಆಗಲೂ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ. ಅದಾದ ನಂತರ ಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಇಟ್ಸ್ ಓಕೆ' ಎಂದು ಬರೆದು ಹೃದಯ ವಿದ್ರಾವಕ ಎಮೋಜಿಯೊಂದಿಗೆ ಸ್ಟೋರಿಯನ್ನು ಪೋಸ್ಟ್ ಮಾಡಿದ್ದರು.
ಹರಾಜಿನ ಅಂತ್ಯದ ವೇಳೆಗೆ, ಪೃಥ್ವಿ ಶಾ ಅವರ ಹೆಸರನ್ನು ಮೂರನೇ ಬಾರಿಗೆ ಪಟ್ಟಿಯಲ್ಲಿ ತಂದಾಗ, ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡವು ಆಯ್ಕೆ ಮಾಡಿತು. ಇದರಿಂದಾಗಿ ಅವರಿಗೆ ಅಚ್ಚರಿಯ ತಿರುವು ಸಿಕ್ಕಿತು.
ಬಳಿಕ ತಕ್ಷಣವೇ ಪ್ರತಿಕ್ರಿಯಿಸಿದ ಶಾ, ಆರು ನಿಮಿಷಗಳಲ್ಲಿಯೇ ತಮ್ಮ ಹಿಂದಿನ ಪೋಸ್ಟ್ ಅನ್ನು ಅಳಿಸಿಹಾಕಿ, ಮತ್ತೊಂದು ಪೋಸ್ಟ್ ಹಂಚಿಕೊಂಡರು. ಡಿಸಿ ನಾಯಕ ಅಕ್ಷರ್ ಪಟೇಲ್ ಅವರೊಂದಿಗೆ ಶಾ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೊವನ್ನು ಒಳಗೊಂಡ ಫ್ರಾಂಚೈಸಿಯ ಪೋಸ್ಟ್ ಅನ್ನೇ ರೀಶೇರ್ ಮಾಡಿಕೊಂಡರು. 'ನನ್ನ ಕುಟುಂಬಕ್ಕೆ ಹಿಂತಿರುಗಿದ್ದೇನೆ' ಎಂದು ಪೃಥ್ವಿ ಶಾ ಈ ಹೊಸ ಪೋಸ್ಟ್‌ಗೆ ಹೃದಯದ ಎಮೋಜಿಯೊಂದಿಗೆ ಶೀರ್ಷಿಕೆ ನೀಡಿದ್ದಾರೆ.
ಈ ವರ್ಷದ ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಗಳಿಸಿದ ಪೃಥ್ವಿ ಶಾ, 2018 ರಿಂದ 2024 ರವರೆಗೆ ತಾವು ಆಡಿದ ಫ್ರಾಂಚೈಸಿಗೆ ಮರಳಿದ್ದಕ್ಕಾಗಿ ತಮ್ಮ ಆಶ್ಚರ್ಯವನ್ನು ಇತ್ತೀಚಿನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
26 ವರ್ಷದ ಪೃಥ್ವಿ ಶಾ, ಅಕ್ಟೋಬರ್ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ ನಂತರ ಭಾರತದ ಪರ ಐದು ಟೆಸ್ಟ್ ಪಂದ್ಯಗಳು ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರ ಕೊನೆಯ ಏಕದಿನ ಪಂದ್ಯ ಶ್ರೀಲಂಕಾ ವಿರುದ್ಧ ಜುಲೈ 23, 2021 ರಂದು ಆಗಿತ್ತು.
2016-17ರ ಆವೃತ್ತಿಯಲ್ಲಿ ಮುಂಬೈ ಪರ ದೇಶೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ನಂತರ, ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್-ಬ್ರೇಕ್ ಬೌಲರ್ ಶಾ, ಈ ಆವೃತ್ತಿಯಲ್ಲಿ ಇತ್ತೀಚೆಗೆ ಮಹಾರಾಷ್ಟ್ರ ತಂಡಕ್ಕೆ ತೆರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



