IPL 2025: ತವರಿನಲ್ಲಿ ಮತ್ತೆ RCBಗೆ ಮುಖಭಂಗ, ಐಪಿಎಲ್ ಇತಿಹಾಸದ ಕಳಪೆ ದಾಖಲೆ ಬರೆದ Rajat Patidar ಪಡೆ!
ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು ತಲಾ 14 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಕ್ರೀಡಾಂಗಣದಲ್ಲಿನ ವೈಫಲ್ಯ ಮುಂದುವರೆದಿದ್ದು, ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಹೀನಾಯ ಸೋಲುಕಂಡಿದೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು.
ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯವನ್ನು ತಲಾ 14 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಕೇವಲ 41ರನ್ ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಐಪಿಎಲ್ ನಲ್ಲಿ ಮತ್ತೆ ಆರ್ ಸಿಬಿ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಅಪಾಯವಿತ್ತು. ಆದರೆ ಈ ಹಂತದಲ್ಲಿ ಕ್ರೀಸ್ ಗೆ ಬಂದ ಟಿಮ್ ಡೇವಿಡ್ ಆರ್ ಸಿಬಿ ಬ್ಯಾಟಿಂಗ್ ಗೆ ಜೀವ ತುಂಬಿದರು.
ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್, 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಅಜೇಯ 50ರನ್ ಗಳಿಸಿದರು. ಆದರೆ ಟಿಮ್ ಡೇವಿಡ್ ಗೆ ತಂಡದ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ನಾಯಕ ರಜತ್ ಪಾಟಿದಾರ್ (23 ರನ್)ಹೊರತು ಪಡಿಸಿದರೆ, ತಂಡದ ಬರೊಬ್ಬರಿ 10 ಆಟಗಾರರ ರನ್ ಗಳಿಕೆ ಒಂದಂಕಿಯಲ್ಲಿತ್ತು. ಇದು ಆರ್ ಸಿಬಿಯ ವೈಫಲ್ಯಕ್ಕೆ ಕಾರಣವಾಯಿತು.
ಪಂಜಾಬ್ ಗೆ 5 ವಿಕೆಟ್ ಅಂತರದ ವಿರೋಚಿತ ಜಯ
ಇನ್ನು ಆರ್ ಸಿಬಿ ನೀಡಿದ 96ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 12.1 ಓವರ್ ನಲ್ಲೇ 5 ವಿಕೆಟ್ ನಷ್ಟಕ್ಕೆ 98ರನ್ ಗಳಿಸಿ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಪಂಜಾಬ್ ಪರ ನೇಹಲ್ ವಧೇರಾ ಅಜೇಯ 33ರನ್ ಗಳಿಸಿ ಪಂಜಾಬ್ ನ ಗೆಲುವಿನ ರೂವಾರಿಯಾದರು.
ಐಪಿಎಲ್ ಇತಿಹಾಸದ ಹೀನಾಯ ದಾಖಲೆ
ಇನ್ನು ಈ ಪಂದ್ಯದ ಸೋಲಿನ ಮೂಲಕ ಆರ್ ಸಿಬಿ ತಂಡ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಸೋಲುಗಳ ಸಂಖ್ಯೆಯನ್ನು 46ಕ್ಕೆ ಏರಿಕೆ ಮಾಡಿಕೊಂಡಿದೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಒಂದು ಮೈದಾನದಲ್ಲಿ ಅತೀ ಹೆಚ್ಚು ಸೋಲು ಕಂಡ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 2ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದ್ದು, ಡಿಸಿ ದೆಹಲಿ ಮೈದಾನದಲ್ಲಿ 45ಪಂದ್ಯಗಳನ್ನು ಸೋತಿದೆ. 3ನೇ ಸ್ಥಾನದಲ್ಲಿ KKR ಇದ್ದು, ಕೋಲ್ಕತಾದಲ್ಲಿ ಈ ತಂಡ 38 ಪಂದ್ಯಗಳನ್ನು ಸೋತಿದೆ. ಮುಂಬೈ ಕೂಡ ವಾಂಖೆಡೆಯಲ್ಲಿ 34 ಮತ್ತು ಮೊಹಾಲಿಯಲ್ಲಿ ಪಂಜಾಬ್ ತಂಡ 30 ಪಂದ್ಯ ಸೋತಿದೆ.
Most defeats at a venue in the IPL
46 - RCB at Bengaluru*
45 - DC at Delhi
38 - KKR at Kolkata
34 - MI at Wankhede
30 - PBKS at Mohali
ತವರಿನಲ್ಲಿ RCBಗೆ ಸತತ 3ನೇ ಸೋಲು
ಇನ್ನು ಹಾಲಿ ಟೂರ್ನಿಯಲ್ಲಿ ಆರ್ ಸಿಬಿ ತಂಡ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಲ್ಲ ಮೂರೂ ಪಂದ್ಯಗಳನ್ನು ಸೋತಿದೆ. ಈ ಹಿಂದೆ ಗುಜರಾತ್ ವಿರುದ್ಧ 8 ವಿಕೆಟ್ ಅಂತರದಲ್ಲಿ ಸೋಲು ಕಂಡಿದ್ದ ಆರ್ ಸಿಬಿ, ಬಳಿಕ ಡೆಲ್ಲಿ ವಿರುದ್ಧ 6 ವಿಕೆಟ್ ಮತ್ತು ಪಂಜಾಬ್ ವಿರುದ್ದ 5 ವಿಕೆಟ್ ಅಂತರದ ಸೋಲು ಕಂಡಿದೆ.
RCB is the only team that has yet to win a home game this season.
Lost vs GT by 8 wickets
Lost vs DC by 6 wickets
Lost vs PBKS by 5 wickets
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



