'ಕ್ರಿಕೆಟ್ ಹೇಳಿಕೊಟ್ಟ ತಂದೆಯೇ ಅದನ್ನು ತ್ಯಜಿಸುವಂತೆ ಹೇಳಿದರು': ಮಾಜಿ ಕ್ರಿಕೆಟಿಗ Sanjay Bangar ಪುತ್ರಿ (ತ್ರ) Anaya ಭಾವುಕ!
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು...

ನವದೆಹಲಿ: ಯಾವ ತಂದೆ ನನಗೆ ಕ್ರಿಕೆಟ್ ಹೇಳಿಕೊಟ್ಟರೋ ಅವರೇ ಆ ಕ್ರೀಡೆಯನ್ನು ತ್ಯಜಿಸುವಂತೆ ಹೇಳಿದರು ಎಂದು ಖ್ಯಾತ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ (ತ್ರ) ಅನಯಾ ಬಂಗಾರ್ ಭಾವುಕರಾಗಿ ಹೇಳಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಅನಯಾ, "ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಪ್ರಮುಖವಾಗಿ ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು ಎಂದು ಭಾವುಕರಾಗಿದ್ದಾರೆ.
'ನನ್ನ ದೇಹ ಬದಲಾವಣೆಯಿಂದ ನಾನು ದೊಡ್ಡ ಬೆಲೆ ತೆರಬೇಕಾಯಿತು. ಕ್ರಿಕೆಟ್ ಕಲಿಸಿದ ತಂದೆಯೇ ಕ್ರಿಕೆಟ್ ತ್ಯಜಿಸುವಂತೆ ಹೇಳಿದರು. ಕ್ರಿಕೆಟ್ನಲ್ಲಿ ಇನ್ನು ಮುಂದೆ ನಿನಗೆ ಜಾಗವಿಲ್ಲ.. ಎಂದು ಹೇಳಿದ್ದರು. ಕುಟುಂಬದ ದೃಷ್ಟಿಕೋನದಿಂದ ನನಗೆ ಇನ್ನೂ ಸ್ಥಳವಿತ್ತು. ಆದರೆ ಸಮಾಜ, ಕ್ರಿಕೆಟ್ ಅಥವಾ ಬಾಹ್ಯ ಪ್ರಪಂಚದಲ್ಲಿ ಅದು ಇರಲಿಲ್ಲ' ಎಂದು ಅನಯಾ ಹೇಳಿದ್ದಾರೆ.
ಆತ್ಮಹತ್ಯೆ ಆಲೋಚನೆಗಳು ಬಂದಿತ್ತು
ಇದೇ ವೇಳೆ ಸಮಾಜದ ವಿರುದ್ಧದ ಹೋರಾಟದಲ್ಲಿ, ಮನಸ್ಸಿನ ಸಂಘರ್ಷ ಮತ್ತು ಬಾಹ್ಯ ಪ್ರಪಂಚದ ರಾಕ್ಷಸರೊಂದಿಗೆ ಹೋರಾಡುತ್ತಿದ್ದ ನಾನು ಸಾಕಷ್ಟು ಜರ್ಜಿರಿತಳಾಗಿದ್ದೆ. ನಾನು ನನ್ನ ಪರವಾಗಿ ನಿಲ್ಲಬೇಕಾಯಿತು. ಇಡೀ ಜಗತ್ತು ನನ್ನ ವಿರುದ್ಧವಾಗಿದೆ ಎಂದು ಭಾವಿಸಿ ನನಗೆ ಆತ್ಮಹತ್ಯೆಯ ಆಲೋಚನೆಗಳು ಬಂದಿದ್ದವು. ಈಗ ಈ ವ್ಯವಸ್ಥೆಯಲ್ಲಿ ನನಗೆ ಯಾವುದೇ ಸ್ಥಾನವಿಲ್ಲ. ಮೂಲಭೂತ ಅವಕಾಶಗಳು ಮತ್ತು ಹಕ್ಕುಗಳು ಸಹ ನನಗೆ ಇನ್ನು ಮುಂದೆ ಇಲ್ಲ ಎಂದು ಅನಯಾ ಹೇಳಿದ್ದಾರೆ.
ನನ್ನ ತಂದೆ ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ನಾನು ನನ್ನ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಇಲ್ಲಿ ನನಗೆ ಬೆಂಬಲವಿದೆ ಅಂತೆಯೇ ಕಿರುಕುಳಗಳೂ ಇವೆ ಎಂದು ಅನಯಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




