ಕ್ರಿಕೆಟ್

1st test, Day 3: ಒಂದೇ ದಿನ 453 ರನ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲೆ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ರನ್ ಗಳು ಹರಿದು ಬಂದಿದೆ. ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ 180 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು 222ರನ್ ಸೇರಿಸಿತು.

1st test, Day 3: ಒಂದೇ ದಿನ 453 ರನ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲೆ!
ಭಾರತ-ನ್ಯೂಜಿಲೆಂಡ್ ಪಂದ್ಯ
Published On :

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೊದಲ ದಿನ ಮಳೆಯಿಂದಾಗಿ ಸುದ್ದಿಯಾದರೆ, 3ನೇ ದಿನ ರನ್ ಗಳ ಸುರಿಮಳೆಯಿಂದ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ರನ್ ಗಳು ಹರಿದು ಬಂದಿದೆ. ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ 180 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು 222ರನ್ ಸೇರಿಸಿತು.

ಅಂತೆಯೇ ಭಾರತ ಕೂಡ ಇಂದು ತನ್ನ 2ನೇ ಇನ್ನಿಂಗ್ಸ್ ನಲ್ಲಿ 231 ರನ್ ಕಲೆಹಾಕಿತು. ಆ ಮೂಲಕ ಇಂದು ಒಂದೇ ದಿನ ಉಭಯ ತಂಡಗಳಿಂದ ಬರೊಬ್ಬರಿ 453 ರನ್ ಗಳು ಹರಿದು ಬಂದಿದ್ದು, ಇದು ದಾಖಲೆಗೆ ಪಾತ್ರವಾಗಿದೆ.

ಭಾರತದಲ್ಲಿ ಒಂದೇ ದಿನ 2ನೇ ಗರಿಷ್ಠ ರನ್

ಇನ್ನು ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಒಂದೇ ದಿನ ಹರಿದು ಬಂದ 2ನೇ ಗರಿಷ್ಠ ರನ್ ಗಳು ಇದಾಗಿದ್ದು, ಈ ಹಿಂದೆ 2009ರಲ್ಲಿ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ 2ನೇ ದಿನ ಬರೊಬ್ಬರಿ 470 ರನ್ ಗಳು ಹರಿದು ಬಂದಿದ್ದವು. ಇದು ಈ ವರೆಗೆ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಒಂದೇ ದಿನ ಬಂದ ಗರಿಷ್ಠ ರನ್ ಗಳಾಗಿವೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನದ ಸ್ಕೋರ್ ಗಳಿಕೆ ಇದೀಗ 2ನೇ ಸ್ಥಾನಕ್ಕೇರಿದೆ.

ಇದೇ ವರ್ಷ ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ 437 ರನ್ ಹರಿದು ಬಂದಿತ್ತು. ಇದು ಮೂರನೇ ಸ್ಥಾನದಲ್ಲಿದೆ.

Most runs in a day's play in India

  • 470 - IND vs SL, Brabourne, 2009 (day 2)

  • 453 - IND vs NZ, Bengaluru, 2024 (day 3)**

  • 437 - IND vs BAN, Kanpur, 2024 (day 4)

  • 418 - IND vs AUS, Mohali, 2013 (day 3)

  • 417 - IND vs SL, Kanpur, 2009 (day 1)

  • 407 - IND vs BAN, Indore, 2019 (day 2)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.