ಐಪಿಎಲ್ 2022: ಸನ್ ರೈಸರ್ಸ್ ಹೈದರಬಾದ್ ಗೆ ಕೋಚ್ ಆಗಿ ಬ್ರಿಯಾನ್ ಲಾರಾ ಆಯ್ಕೆ
ಮಾಜಿ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ತಮ್ಮ ಹೊಸ ಕೋಚಿಂಗ್ ಸಿಬ್ಬಂದಿಯನ್ನು 2022ರ ಆವೃತ್ತಿಗೆ ಕ್ರಿಕೇಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ಸೇರಿದಂತೆ ನಾಲ್ಕು ಮಂದಿಯ ಹೆಸರುಗಳನ್ನ ಬಹಿರಂಗಪಡಿಸಿದೆ.

ಹೈದರಾಬಾದ್: ಮಾಜಿ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ತಮ್ಮ ಹೊಸ ಕೋಚಿಂಗ್ ಸಿಬ್ಬಂದಿಯನ್ನು 2022ರ ಆವೃತ್ತಿಗೆ ಕ್ರಿಕೇಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ಸೇರಿದಂತೆ ನಾಲ್ಕು ಮಂದಿಯ ಹೆಸರುಗಳನ್ನ ಬಹಿರಂಗಪಡಿಸಿದೆ.
ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ಮತ್ತು ಐಪಿಎಲ್ ಕಾರ್ಯತಂತ್ರದ ಸಲಹೆಗಾರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಮುಂಬರುವ ಆವೃತ್ತಿಯಲ್ಲಿ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ
ಭಾರತದ ಮಾಜಿ ಬ್ಯಾಟ್ಸ್‌ಮನ್ ಹೇಮಂಗ್ ಬದಾನಿಯನ್ನು ಫೀಲ್ಡಿಂಗ್ ಕೋಚ್. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಸೈಮನ್ ಕ್ಯಾಟಿಚ್ ಸನ್ ರೈಸರ್ಸ್ ಹೈದರಬಾದ್ ನ ಸಹಾಯಕ ಕೋಚ್ ಆಗಿರುತ್ತಾರೆ. ಹೊಸದಾಗಿ ನೇವಕವಾಗಿರುವ ಎಲ್ಲಾ ತರಬೇತುದಾರರು ಮುಖ್ಯ ತರಬೇತುದಾರ ಟಾಮ್ ಮೂಡಿ ಅವರ ನೇತೃತ್ವದಲ್ಲಿ ಕೆಲಸ ಮಾಡಲಿದ್ದಾರೆ. ಮತ್ತು ಮುತ್ತಯ್ಯ ಮುರಳೀಧರನ್ ತಂತ್ರ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


