ಇಂಗ್ಲೆಂಡ್- ಭಾರತ 2ನೇ ಟೆಸ್ಟ್: ನಿರಂತರ ವಾಗ್ವಾದ ಪಂದ್ಯ ಗೆಲ್ಲಲು ಹೆಚ್ಚಿನ ಪ್ರೇರಣೆ ನೀಡಿತು- ಕೊಹ್ಲಿ
ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐದನೇ ದಿನದಾಟದ ಅಂತ್ಯದಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಪಡೆ ಸಹಜವಾಗಿಯೇ ಹೆಚ್ಚು ಪ್ರೇರಣೆಗೊಂಡು ದಿಗ್ವಿಜಯ ಸಾಧಿಸಿದೆ.
ಕಳೆದ ಬಾರಿ ಎಂಎಸ್ ಧೋನಿ ನಾಯಕತ್ವದಲ್ಲಿನ ಟೀಂ ಇಂಡಿಯಾ ಟೆಸ್ಟ್ ಗೆದ್ದಾಗ ನಾನು ಟೀಂ ಇಂಡಿಯಾದ ಭಾಗವಾಗಿದ್ದೆ. ಅದು ವಿಶೇಷವಾಗಿರುವಂತೆಯೇ, ಇಶಾಂತ್ ಶರ್ಮಾ ಅದ್ಬುತ ಪ್ರದರ್ಶನ ನೀಡುವ ಮೂಲಕ ನಾಲ್ಕನೇ ದಿನದಂದು ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಸಿರಾಜ್ ಅಂತಹ ಆಟಗಾರರು ಮೊದಲ ಬಾರಿಗೆ ಲಾರ್ಡ್ಸ್ ಮೈದಾನದಲ್ಲಿ ಅದ್ಬುತ ಪ್ರದರ್ಶನ ತೋರಿದ್ದಾರೆ. ಮೈದಾನದಲ್ಲಿ ನಡೆದ ಮಾತಿನ ಚಕಮಕಿ, ನಿಜಕ್ಕೂ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


