ಕ್ರಿಕೆಟ್

ಐಪಿಎಲ್ 2020: ಗೆಲುವಿನ ಲಯಕ್ಕೆ ಮರಳಿದ ಧೋನಿ ಪಡೆ, ಹೈದರಾಬಾದ್ ವಿರುದ್ಧ ಚೆನ್ನೈಗೆ 20 ರನ್ ಗಳ ಜಯ

ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸೋಲಿನ ಸುಳಿಗೆ ಸುಲುಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಟ್ರ್ಯಾಕ್ ಮರಳಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 20 ರನ್ ಗಳ ಜಯ ಸಾಧಿಸಿದೆ.

ಐಪಿಎಲ್ 2020: ಗೆಲುವಿನ ಲಯಕ್ಕೆ ಮರಳಿದ ಧೋನಿ ಪಡೆ, ಹೈದರಾಬಾದ್ ವಿರುದ್ಧ ಚೆನ್ನೈಗೆ 20 ರನ್ ಗಳ ಜಯ
ಚೆನ್ನೈಗೆ ಜಯ
Published On :

ದುಬೈ: ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸೋಲಿನ ಸುಳಿಗೆ ಸುಲುಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಟ್ರ್ಯಾಕ್ ಮರಳಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 20 ರನ್ ಗಳ ಜಯ ಸಾಧಿಸಿದೆ.

ಚೆನ್ನೈ ನೀಡಿದ್ದ 168 ರನ್ ಗಳ ಸವಾಲಿನ ಗುರಿಯನ್ನು ಬೆನ್ನುಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಚೆನ್ನೈ ಎದುರು 20 ರನ್ ಗಳ ಅಂತರದಲ್ಲಿ ಶರಣಾಯಿತು. ಹೈದರಾಬಾದ್ ಪರ ಕೇನ್ ವಿಲಿಯಮ್ಸನ್  (57 ರನ್) ಮತ್ತು ಜಾನಿ ಬೇರ್ ಸ್ಟೋ (23 ರನ್)ರನ್ನು ಹೊರತು ಪಡಿಸಿದರೆ, ಉಳಿದಾವ ಆಟಗಾರರೂ ಪ್ರತಿರೋಧ ತೋರಲೇ ಇಲ್ಲ. ಹೀಗಾಗಿ ಹೈದರಾಬಾದ್ ತಂಡ ಕೇವಲ 147 ರನ್ ಗಳನ್ನು ಮಾತ್ರ ಗಳಿಸಿತು. ಚೆನ್ನೈ ಪರ ಕರಣ್ ಶರ್ಮಾ ಮತ್ತು ಡ್ವೇಯ್ನ್ ಬ್ರಾವೋ ತಲಾ 2 ವಿಕೆಟ್ ಉರುಳಿಸಿ ಹೈದಾರಾಬಾದ್ ಗೆ  ಮರ್ಮಾಘಾತ ನೀಡಿದರು. ಉಳಿದಂತೆ ಸ್ಯಾಮ್ ಕರನ್, ರವೀಂದ್ರ ಜಡೇಜಾ ಮತ್ತು ಶಾರ್ದುಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಆರಂಭಿಕ ಆಘಾತ ಎದುರಿಸಿತು. ಮೊದಲ ಎಸೆತದಲ್ಲೇ ಡುಪ್ಲೆಸಿಸ್ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಸ್ಯಾಮ್ ಕರನ್ (31 ರನ್) ಮತ್ತು ಶೇನ್ ವಾಟ್ಸನ್ (42) ಜೋಡಿ ಚೆನ್ನೈ ತಂಡವನ್ನು ಆರಂಭಿಕ ಆಘಾತದಿಂದ  ಮೇಲೆತ್ತಿತು. ಬಳಿಕ ಅಂಬಾಟಿ ರಾಯುಡು (41 ರನ್), ಮಹೇಂದ್ರ ಸಿಂಗ್ ಧೋನಿ (21 ರನ್) ಮತ್ತು ರವೀಂದ್ರ ಜಡೇಜಾ (ಅಜೇಯ 25 ರನ್) ಚೆನ್ನೈ ಸವಾಲಿನ ಮೊತ್ತ ಪೇರಿಸಲು ನೆರವಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.