ಕ್ರಿಕೆಟ್

11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್‌ ದಂಪತಿ

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು.

11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್‌ ದಂಪತಿ
ಡಿವಿಲಿಯರ್ಸ್-ಡೇನಿಯಲ್
Published On :

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು.

ಇದಕ್ಕೂ ಮುನ್ನ ಎಬಿಡಿ ಇಬ್ಬರು ಅಬ್ರಹಾಂ ಡಿ ವಿಲಿಯರ್ಸ್ ಹಾಗೂ ಜಾನ್‌ ರಿಚರ್ಡ್‌ ಡಿ ವಿಲಿಯರ್ಸ್ ಇಬ್ಬರು ಗಂಡು ಮಕ್ಕಳಿಗೆ ತಂದೆಯಾಗಿದ್ದರು.

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದಶಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್‌ಗೆ ತಮಗೆ ಮೂರನೇ ಮಗುವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಪತ್ನಿ ಹಾಗೂ ಹೊಸದಾಗಿ ಜನಿಸಿರುವ ಮಗಳಿನೊಂದಿಗಿನ ಫೋಟೊವನ್ನು ಎಬಿ ಡಿವಿಲಿಯರ್ಸ್ ಪೋಸ್ಟ್‌ ಮಾಡಿದ್ದಾರೆ. ಮಗಳಿಗೆ ಇಟ್ಟಿರುವ 'ಯೆಂಟೆ ಡಿ ಡಿವಿಲಿಯರ್ಸ್' ಎಂಬ ಹೆಸರನ್ನು ಅವರು ಬಹಿರಂಗ ಪಡಿಸಿದರು.

"11-11-2020 ರಂದು ನಾವು ಮೂರನೇ ಮಗುವನ್ನು ಪ್ರಪಂಚಕ್ಕೆ ಸ್ವಾಗತಿಸಿದ್ದೆವು" ಎಂಬ ಶೀರ್ಷಿಕೆಯನ್ನು ನೀಡಿರುವ ಡಿವಿಲಿಯರ್ಸ್, "ಯೆಂಟೆ ಡಿವಿಲಿಯರ್ಸ್, ನೀವು ನಮ್ಮ ಕುಟುಂಬಕ್ಕೆ ಪರಿಪೂರ್ಣ ಸೇರ್ಪಡೆ ಮತ್ತು ಆಶೀರ್ವಾದ. ನಿಮಗಾಗಿ ಲೆಕ್ಕಕ್ಕಿಂತ ಮೀರಿ ನಾವು ಕೃತಜ್ಞರಾಗಿರುತ್ತೇವೆ!' ಎಂದು ಎರಡನೇ ಸಾಲಿನಲ್ಲಿ ತನ್ನ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.