ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದ ಕೇನ್ ರಿಚರ್ಡ್‌ಸನ್
ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್‌ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ.

ಸಿಡ್ನಿ: ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್‌ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ.
ರಿಚರ್ಡ್‌ಸನ್ ಅಡಿಲೇಡ್ ನಲ್ಲಿ ತನ್ನ ಪತ್ನಿ ಹಾಗೂ ನವಜಾತ ಮಗುವಿನೊಂದಿಗೆ ಕಾಲ ಕಳೆಯುವ ಸಲುವಾಗಿ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಹೇಳಿದೆ.
"ಕೇನ್ ನಿರ್ಧಾರ ತಂಡಕ್ಕೆ ಕಠಿಣವಾಗಿದೆ ಆದರೆ ಅವರ ನಿರ್ಧಾರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ." ಎಂದು ನ್ಯಾಷನಲ್ ಸೆಲೆಕ್ಟರ್ ಟ್ರೆವರ್ ಹೊನ್ಸ್ ಹೇಳಿದ್ದಾರೆ.
ಇನ್ನು ರಿಚರ್ಡ್‌ಸನ್ ಬದಲಿ ಆಟಗಾರ 33 ವರ್ಷದ ಟೈ 7 ಏಕದಿನ ಮತ್ತು 26 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಆಸ್ಟ್ರೇಲಿಯಾದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಕಪ್ ಪೇಸ್‌ಮ್ಯಾನ್ ಆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


