ಕ್ರಿಕೆಟ್

ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ

ಪ್ರಥಮ ದರ್ಜೆ ಕ್ರಿಕೆಟ್‌ನ ಮಾಜಿ ಆಟಗಾರ ಹಾಗೂ ಅತ್ಯಂತ ಹಿರಿಯ ವಯಸ್ಸಿನ ವಸಂತ್ ರೈಜಿ ಅವರು ಭಾನುವಾರ 100 ವಸಂತಕ್ಕೆ ಕಾಲಿಟ್ಟರು.

ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
Published On :

ಮುಂಬೈ: ಪ್ರಥಮ ದರ್ಜೆ ಕ್ರಿಕೆಟ್‌ನ ಮಾಜಿ ಆಟಗಾರ ಹಾಗೂ ಅತ್ಯಂತ ಹಿರಿಯ ವಯಸ್ಸಿನ ವಸಂತ್ ರೈಜಿ ಅವರು ಭಾನುವಾರ 100 ವಸಂತಕ್ಕೆ ಕಾಲಿಟ್ಟರು.

ವಸಂತ್ ರೈಜಿ ಬಲಗೈ ಬ್ಯಾಟ್ಸ್‌‌ಮನ್ ಆಗಿದ್ದು, 1940ರಲ್ಲಿ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಾಡಿ 277 ರನ್ ಗಳಿಸಿದ್ದರು. ಇವರ ವೈಯಕ್ತಿಕ ಗರಿಷ್ಠ ರನ್ 68 ರನ್. ಇತಿಹಾಸಗಾರರಾಗಿರುವ ರೈಜಿ ಅವರು 13ನೇ ವಯಸ್ಸಿನಲ್ಲಿದ್ದಾಗ ಭಾರತ ತಂಡ ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನ ಅಂಗಳದಲ್ಲಿ ಮೊದಲ ಟೆಸ್ಟ್‌ ಪಂದ್ಯ ಆಡಿತ್ತು. ಅಂದಿನಿಂದ ಇಲ್ಲಿಯವರೆಗೂ ಭಾರತೀಯ ಕ್ರಿಕೆಟ್‌ನ ಪಯಣವನ್ನು ವಸಂತ ರೈಜಿ ಕಣ್ತುಂಬಿಸಿಕೊಂಡಿದ್ದಾರೆ. ಇವರು ಬಾಂಬೆ (ಮುಂಬೈ) ಹಾಗೂ ಬರೋಡ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ.

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ ಅವರು ಇತ್ತೀಚೆಗೆ ವಸಂತ್ ಅವರ ನಿವಾಸಕ್ಕೆ ತೆರಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.