ಕ್ರಿಕೆಟ್

ಐಪಿಎಲ್ 2020ಗೆ ಸುರೇಶ್ ರೈನಾ ಅಲಭ್ಯ:ಅರ್ಧಕ್ಕೆ ಭಾರತಕ್ಕೆ ವಾಪಸ್ಸಾದ ಅನುಭವಿ ಬ್ಯಾಟ್ಸ್‌ಮನ್

ಕೊರೋನಾ ಮಧ್ಯೆ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ ಐಪಿಎಲ್ ಸರಣಿ ಆರಂಭವಾಗುತ್ತಿದೆ. ಆದರೆ ಈ ಹೊತ್ತಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತವಾಗಿದ್ದು ಹಿರಿಯ ಬ್ಯಾಟ್ಸ್ ಮ್ಯಾನ್ ಸುರೇಶ್ ರೈನಾ ತಂಡಕ್ಕೆ ಅಲಭ್ಯವಾಗಿದ್ದಾರೆ.

ಐಪಿಎಲ್ 2020ಗೆ ಸುರೇಶ್ ರೈನಾ ಅಲಭ್ಯ:ಅರ್ಧಕ್ಕೆ ಭಾರತಕ್ಕೆ ವಾಪಸ್ಸಾದ ಅನುಭವಿ ಬ್ಯಾಟ್ಸ್‌ಮನ್
ಎಂ ಎಸ್ ಧೋನಿ ಜೊತೆ ಸುರೇಶ್ ರೈನಾ(ಸಂಗ್ರಹ ಚಿತ್ರ)
Published On :

ನವದೆಹಲಿ: ಕೊರೋನಾ ಮಧ್ಯೆ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ ಐಪಿಎಲ್ ಸರಣಿ ಆರಂಭವಾಗುತ್ತಿದೆ. ಆದರೆ ಈ ಹೊತ್ತಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತವಾಗಿದ್ದು ಹಿರಿಯ ಬ್ಯಾಟ್ಸ್ ಮ್ಯಾನ್ ಸುರೇಶ್ ರೈನಾ ತಂಡಕ್ಕೆ ಅಲಭ್ಯವಾಗಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ಅವರು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ಐಪಿಎಲ್ ಇಂದು ಬೆಳಗ್ಗೆ ಪ್ರಕಟಿಸಿದೆ.

ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ವಾಪಸ್ಸಾಗಿದ್ದು ಐಪಿಎಲ್ ಸರಣಿಗೆ ಅವರು ಸಿಗುವುದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಈ ಸಮಯದಲ್ಲಿ ಅವರು ಹಾಗೂ ಅವರ ಕುಟುಂಬದವರ ಜೊತೆಗೆ ಇರುತ್ತದೆ ಎಂದು ಫ್ರಾಂಚೈಸಿಯ ಸಿಇಒ ಕೆ ಎಸ್ ವಿಶ್ವನಾಥನ್ ತಿಳಿಸಿದ್ದಾರೆ.

ಸಿಎಸ್ ಕೆ ತಂಡದ 12 ಸದಸ್ಯರು ಕೋವಿಡ್-19ಗೆ ಒಳಗಾಗಿದ್ದಾರೆ ಎಂದು ನಿನ್ನೆಯಷ್ಟೇ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಡೀ ತಂಡ ಕ್ವಾರಂಟೈನ್ ಗೆ ಒಳಗಾಗಿದೆ. ಚೆನ್ನೈಯಲ್ಲಿ ಕ್ಯಾಂಪ್ ವೇಳೆ ಸೋಂಕಿಗೆ ತುತ್ತಾಗಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ಆಗಸ್ಟ್ 21ರಂದು ದುಬೈಗೆ ತೆರಳಿದ್ದ ಸಿಎಸ್ ಕೆ ತಂಡ ಕಡ್ಡಾಯವಾಗಿ ಆರು ದಿನ ಕ್ವಾರಂಟೈನ್ ಗೆ ಒಳಗಾಗಿತ್ತು.

ಇತ್ತೀಚೆಗಷ್ಟೇ ಧೋನಿಯವರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಸುರೇಶ್ ರೈನಾ 13 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು 18 ಟೆಸ್ಟ್, 226 ಏಕದಿನ ಸರಣಿ ಮತ್ತು 78 ಟಿ20 ಸರಣಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

33 ವರ್ಷದ ಸುರೇಶ್ ರೈನಾ ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 193 ಪಂದ್ಯಗಳನ್ನಾಡಿದ್ದು ಅದರಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಗಳನ್ನು, 25 ವಿಕೆಟ್ ಗಳನ್ನು ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.