ನೋ ಬಾಲ್ ತಪ್ಪಿಸಲು ಪೊಲಾರ್ಡ್‌ನಿಂದ ಬೊಂಬಾಟ್ ಐಡಿಯಾ, ಅಂಪೈರ್ ಕಕ್ಕಾಬಿಕ್ಕಿ, ವಿಡಿಯೋ ವೈರಲ್!
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀರನ್ ಪೊಲಾರ್ಡ್ ನೋಬಾಲ್ ತಪ್ಪಿಸಲು ಬೊಂಬಾಟ್ ಐಡಿಯಾ ಮಾಡಿದ್ದು ಇದನ್ನು ಕಂಡ ಅಂಪೈರ್ ಕಕ್ಕಾಬಿಕ್ಕಿಯಾಗಿರುವ ಘಟನೆ ನಡೆದಿದೆ.

ಲಖನೌ: ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀರನ್ ಪೊಲಾರ್ಡ್ ನೋಬಾಲ್ ತಪ್ಪಿಸಲು ಬೊಂಬಾಟ್ ಐಡಿಯಾ ಮಾಡಿದ್ದು ಇದನ್ನು ಕಂಡ ಅಂಪೈರ್ ಕಕ್ಕಾಬಿಕ್ಕಿಯಾಗಿರುವ ಘಟನೆ ನಡೆದಿದೆ.
ಲಖನೌನಲ್ಲಿ ನಡೆದ ಆಫ್ಗಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಈ ಪ್ರಸಂಗ ನಡೆದಿದೆ. ಹೌದು ಬೌಲಿಂಗ್ ಮಾಡುತ್ತಿದ್ದ ಕೀರನ್ ಪೊಲಾರ್ಡ್ ತಾವು ನೋಬಾಲ್ ಬಾಲ್ ಗೆರೆಯನ್ನು ದಾಟಿರುವುದು ಮನದಟ್ಟಾಗಿದೆ.
ಕೂಡಲೇ ಬೌಲಿಂಗ್ ಮಾಡದೇ ಮುಂದಕ್ಕೆ ಓಡಿದರು. ಇನ್ನು ನೋಬಾಲ್ ಅನ್ನು ಗಮನಿಸಿದ್ದ ಅಂಪೈರ್ ಇನ್ನೇನು ನೋಬಾಲ್ ಕೊಡಬೇಕು ಅನ್ನುಷ್ಟರಲ್ಲಿ ಪೋಲಾರ್ಡ್ ಚೆಂಡು ಎಸೆಯದಿರುವುದು ಕಂಡು ಬಂದಿದ್ದು ಗಲಿಬಿಲಿಯಾದ ಅವರು ಕೊಂಚ ಹೊತ್ತಿನ ನಂತರ ನಗುತ್ತಾ ಡೆಡ್ ಬಾಲ್ ಎಂದು ಘೋಷಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ಘಾನ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ವಿಂಡೀಸ್ ತಂಡ ಇನ್ನು 8 ಎಸೆತ ಇರುವಂತೆ 253 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


