ಕ್ರಿಕೆಟ್

ನಾಲಾಯಕ್ ಟೀಕೆ ನಂತರ ಇದೀಗ ರನೌಟ್ ಮಾಡಿ ಭೇಷ್ ಎನಿಸಿಕೊಂಡ ರಿಷಬ್ ಪಂತ್, ವಿಡಿಯೋ ವೈರಲ್!

ಭಾರತ ತಂಡದ ಕೀಪರ್ ಆಗಲು ರಿಷಬ್ ಪಂತ್ ನಾಲಾಯಕ್ ಎಂಬ ಟೀಕೆಗಳು ವ್ಯಕ್ತವಾಗಿದ್ದು ಇದರ ಬೆನ್ನಲ್ಲೇ ಪಂತ್ ರನೌಟ್ ಮಾಡಿ ತಾವು ಸಮರ್ಥ ಕೀಪರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ನಾಲಾಯಕ್ ಟೀಕೆ ನಂತರ ಇದೀಗ ರನೌಟ್ ಮಾಡಿ ಭೇಷ್ ಎನಿಸಿಕೊಂಡ ರಿಷಬ್ ಪಂತ್, ವಿಡಿಯೋ ವೈರಲ್!
ರಿಷಬ್ ಪಂತ್
Published On :

ರಾಜ್ ಕೋಟ್: ಭಾರತ ತಂಡದ ಕೀಪರ್ ಆಗಲು ರಿಷಬ್ ಪಂತ್ ನಾಲಾಯಕ್ ಎಂಬ ಟೀಕೆಗಳು ವ್ಯಕ್ತವಾಗಿದ್ದು ಇದರ ಬೆನ್ನಲ್ಲೇ ಪಂತ್ ರನೌಟ್ ಮಾಡಿ ತಾವು ಸಮರ್ಥ ಕೀಪರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಲಿಟನ್ ದಾಸ್ 29 ರನ್ ಪೇರಿಸಿ ಉತ್ತಮವಾಗಿ ಆಡುತ್ತಿದ್ದರು. ಈ ವೇಳೆ 7ನೇ ಓವರ್ ನ 2 ಎಸೆತದಲ್ಲಿ ಯಜುವೇಂದ್ರ ಚಹಾಲ್ ಗೂಗ್ಲಿಗೆ ಲಿಟನ್ ತತ್ತರಿಸಿದ್ದರು. ಪ್ಯಾಡ್ ಗೆ ಚೆಂಡು ತಗುಲಿ ರಿಷಬ್ ಕೈಸೇರಲಿತ್ತು. ಆದರೆ ಪಂತ್ ಎಲ್ ಬಿಡಬ್ಲ್ಯೂ ಅಪೀಲ್ ನಲ್ಲಿ ತೊಡಗಿದ್ದರಿಂದ ಚೆಂಡನ್ನು ಹಿಡಿಯಲಿಲ್ಲ. 

ಚೆಂಡು ಮುಂದಕ್ಕೆ ಹೋಗುತ್ತಿದ್ದಂತೆ ಲಿಟನ್ ಒಂದು ರನ್ ತೆಗೆದುಕೊಳ್ಳಲು ಮುಂದಾದರೂ ಇದನ್ನು ಕಂಡ ಪಂತ್ ಕೂಡಲೇ ಚೆಂಡನ್ನು ಹಿಡಿದು ವಿಕೆಟ್ ಗೆ ಹೊಡೆದರು. ಈ ಮೂಲಕ ಬಾಂಗ್ಲಾದ ಮೊದಲ ವಿಕೆಟ್ ಪತನಗೊಂಡಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.