ಐಸಿಸಿ ವಿಶ್ವಕಪ್ 2019: ದಾಖಲೆ ನಿರ್ಮಿಸಿದ ರೋ'ಹಿಟ್' ಶರ್ಮಾ, ಕೆಎಲ್ ರಾಹುಲ್
ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

Published On :
ಲಂಡನ್: ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಹೌದು.. ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಅಮೋಘ ಜೊತೆಯಾಟ ಪ್ರದರ್ಶಿಸಿದ ರೋಹಿತ್ ಶರ್ಮಾ ಮತ್ತು ಕೆಎಸ್ ರಾಹುಲ್ ಜೋಡಿ ಭಾರತದ ಪರ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಜೋಡಿ ಮೊದಲ ವಿಕೆಟ್ ಗೆ 176 ರನ್ ಗಳಿಸುವ ಮೂಲಕ ಭಾರತದ ಪರ ಗರಿಷ್ಠ ಆರಂಭಿಕ ಜೊತೆಯಾಟವಾಡಿದ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
92 ಎಸೆತಗಳಲ್ಲಿ ರೋಹಿತ್ ಶರ್ಮಾ 104ರನ್ ಗಳನ್ನು ಸಿಡಿಸಿದರೆ, ಕೆಎಲ್ ರಾಹುಲ್ 92 ಎಸೆತಗಳಲ್ಲಿ 77 ರನ್ ಗಳಿಸಿ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಆ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಭಾರತದ ಪರ ಗರಿಷ್ಟ ರನ್ ಗಳ ಜೊತೆಯಾಟವಾಡಿದ ಜೋಡಿ ಎಂಬಿ ಕೀರ್ತಿಗೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು 2015ರಲ್ಲಿಯೂ ಇದೇ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಹ್ಯಾಮಿಲ್ಟನ್ ನಲ್ಲಿ ಐರ್ಲೆಂಡ್ ವಿರುದ್ಧ 174 ರನ್ ಗಳ ಜೊತೆಯಾಟವಾಡಿತ್ತು. ಇದಕ್ಕೂ ಮೊದಲು 1996ರಲ್ಲಿ ಅಜಯ್ ಜಡೇಜಾ ಮತ್ತು ಸಚಿನ್ ತೆಂಡೂಲ್ಕರ್ ಜೋಡಿ 163 ರನ್ ಗಳ ಜೊತೆಯಾಟವಾಡಿತ್ತು. ಇದಾದ ಬಳಿಕ 2003ರಲ್ಲಿ ಸಚಿನ್ ಮತ್ತು ಸೆಹ್ವಾಗ್ ಜೋಡಿ 153 ರನ್ ಗಳ ಜೊತೆಯಾಟವಾಡಿದ್ದು ಈ ವರೆಗಿನ ಶ್ರೇಷ್ಟ ಆರಂಭಿಕ ಜೊತೆಯಾಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕ್ರಿಕೆಟ್Londonಲಂಡನ್indiaಭಾರತRohit Sharmaರೋಹಿತ್ ಶರ್ಮಾಬಾಂಗ್ಲಾದೇಶBangladeshKL Rahulಕೆಎಲ್ ರಾಹುಲ್Cricket OffbeatICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


