'ನಾನೇ ಕ್ರಿಕೆಟ್‌ನ ಡಾನ್' ಪಾಕ್ ಮಾಜಿ ವೇಗಿ ಶೋಯಬ್ ಅಖ್ತರ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಮಂಗಳಾರತಿ!
ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ತನ್ನನ್ನು ತಾನು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ...

Published On :
ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ತನ್ನನ್ನು ತಾನು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.
ಶೋಯಬ್ ಅಖ್ತರ್ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್ ಮನ್ ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಆತ ಪಾಕಿಸ್ತಾನ ಕ್ರಿಕೆಟ್ ಜಗತ್ತಿಗೆ ಅಪರೂಪದ ವೇಗಿ ಎಂದರೆ ಅತಿಶಯೋಕ್ತಿಯಲ್ಲ.
ಶೋಯಬ್ ಅಖ್ತರ್ ಮಾರಕ ಬೌಲಿಂಗ್ ದಾಳಿಗೆ ಕೆಲವು ಬ್ಯಾಟ್ಸ್ ಮನ್ ಗಳು ತೀವ್ರ ಗಾಯಕ್ಕೆ ತುತ್ತಾಗಿದ್ದು ಇದೆ. 161 ಕಿ.ಮೀ ವೇಗದಲ್ಲಿ ಬೌಲಿಂಗ್ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದ ಅಖ್ತರ್ ಇದೀಗ ತಮ್ಮನ್ನು ತಾವು ಕ್ರಿಕೆಟ್ ಡಾನ್ ಎಂದು ಕರೆದುಕೊಂಡಿದ್ದು ಅದಕ್ಕೆ ಟ್ವೀಟರಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಶೋಯಬ್ ಅಖ್ತರ್ ತಮ್ಮ ಟ್ವೀಟರ್ ಖಾತೆಯಲ್ಲಿ ಕೆಲವರು ನನ್ನನ್ನು ಕ್ರಿಕೆಟ್ ನ ಡಾನ್ ಎಂದು ಕರೆಯುತ್ತಾರೆ. ಆದರೆ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ನೋವು ಮಾಡುವುದು ನನ್ನ ಉದ್ದೇಶವಲ್ಲ. ಒಂದಂತು ಸತ್ಯ ನನ್ನ ದೇಶಕ್ಕಾಗಿ ಆಡುವ ಸ್ಫೂರ್ತಿಯಲ್ಲಿ ಈ ರೀತಿಯ ಪ್ರದರ್ಶನ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಅಖ್ತರ್ ಟ್ವೀಟ್ ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕ್ ವೇಗಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ಟ್ರೋಲ್ ಮಾಡಿದ್ದಾರೆ.
Don of cricket..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
TwitterPakistanಪಾಕಿಸ್ತಾನಟ್ವೀಟರ್Shoaib Akhtarಶೋಯಬ್ ಅಖ್ತರ್Indian Fansಭಾರತೀಯ ಅಭಿಮಾನಿಗಳುDon of Cricketಡಾನ್ ಆಫ್ ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


