ಕ್ರಿಕೆಟ್

ಅನುಷ್ಕಾ ಶರ್ಮಾಗೆ 30ನೇ ಜನ್ಮದಿನ ಸಂಭ್ರಮ, ಪ್ರೀತಿಯ ಮಡದಿಗೆ ವಿಶೇಷ ಶುಭ ಕೋರಿದ ಪತಿ ವಿರಾಟ್ ಕೊಹ್ಲಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ 30ನೇ ಜನ್ಮ ದಿನ ಸಂಭ್ರಮದಲ್ಲಿದ್ದು, ಈ ವೇಳೆ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರೀತಿಯ ಮಡದಿಗೆ ವಿಶೇಷವಾಗಿ ಶುಭಕೋರಿದ್ದಾರೆ.

ಅನುಷ್ಕಾ ಶರ್ಮಾಗೆ  30ನೇ ಜನ್ಮದಿನ ಸಂಭ್ರಮ, ಪ್ರೀತಿಯ ಮಡದಿಗೆ ವಿಶೇಷ ಶುಭ ಕೋರಿದ ಪತಿ ವಿರಾಟ್ ಕೊಹ್ಲಿ
ಮಡದಿಗೆ ಜನ್ಮದಿನದ ಶುಭ ಕೋರಿದ ವಿರಾಟ್ ಕೊಹ್ಲಿ
Published On :
ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ಮಾ 30ನೇ ಜನ್ಮ ದಿನ ಸಂಭ್ರಮದಲ್ಲಿದ್ದು, ಈ ವೇಳೆ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರೀತಿಯ ಮಡದಿಗೆ ವಿಶೇಷವಾಗಿ ಶುಭಕೋರಿದ್ದಾರೆ.
ಐಪಿಎಲ್ ನ ಆರ್ ಸಿಬಿ ಪಂದ್ಯದ ನಿಮಿತ್ತ ಬೆಂಗಳೂರಿನಲ್ಲೇ ವಿರಾಟ್ ಕೊಹ್ಲಿ ಉಳಿದುಕೊಂಡಿದ್ದು, ತನ್ನ ಜನ್ಮ ದಿನದಂದು ಅನುಷ್ಕಾ ಕೂಡ ಶೂಟಿಂಗ್ ಪ್ಯಾಕಪ್ ಹೇಳಿ ಬೆಂಗಳೂರಿಗೆ ಆಗಮಿಸಿದ್ದಾರೆ. ದಂಪತಿಗಳು ರಾತ್ರಿಯೇ ಜನ್ಮದಿನ ಸಂಭ್ರಮಾಚರಣೆ ಮಾಡಿಕೊಂಡಿದ್ದು, ಪ್ರೀತಿಯ ಮಡದಿಗೆ ಕೊಹ್ಲಿ ಕೇಕ್ ತಿನ್ನಿಸುತ್ತಿರುವ ಸೆಲ್ಫಿ ತೆಗೆದುಕೊಂಡು ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
'ನನ್ನ ಪ್ರೀತಿಯೇ ನಿನಗೆ ಜನ್ಮ ದಿನದ ಶುಭಾಶಯಗಳು.. ನಾನು ತಿಳಿದಿರುವ ಅತ್ಯಂತ ಧನಾತ್ಮಕ ಮತ್ತು ಪ್ರಾಮಾಣಿಕ ವ್ಯಕ್ತಿ ನೀನು. ಸಾದಾಕಾಲ ನಿನ್ನನ್ನು ಪ್ರೀತಿಸುತ್ತಿರುತ್ತೇವೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಟ್ವೀಟ್ ಇದೀಗ ವಿರುಷ್ಕಾ ಅಭಿಮಾನಿಗಳ ಮನಗೆದ್ದಿದ್ದು, ಸಾವಿರಾರು ಮಂದಿ ಅನುಷ್ಕಾಗೆ ಶುಭಾಶಯ ಕೋರಿದ್ದಾರೆ.
ಇನ್ನು ಇಂದು ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮಹತ್ವದ ಐಪಿಎಲ್ ಪಂದ್ಯವಿದ್ದು, ಇದೇ ಕಾರಣಕ್ಕೆ ಕೊಹ್ಲಿ ಈ ಪಂದ್ಯಕ್ಕೆ ತಯಾರಾಗಬೇಕಿದೆ. ಈ ಉದ್ದೇಶದಿಂದ ಕೊಹ್ಲಿ ಪತ್ನಿ ಅನುಷ್ಕಾಗೆ ಶುಕ್ರವಾರ ರಾತ್ರಿಯೇ ಪಾರ್ಟಿ ಕೊಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೆಲವು ಸ್ನೇಹಿತರ ಬಳಗವೂ ಜತೆಗಿತ್ತು. ಸದ್ಯಕ್ಕೆ ವಿರಾಟ್ ತಂಡಕ್ಕೆ ಚಿಯರ್ ಅಪ್ ಮಾಡಲು ಬೆಂಗಳೂರಿನಲ್ಲಿರುವ ಅನುಷ್ಕಾ ಜನ್ಮ ದಿನ ಮುಗಿಸಿಕೊಂಡು ತಮ್ಮ ಶೂಟಿಂಗ್ ಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.