ಸನ್ ರೈಸರ್ಸ್ ನಾಯಕನಾಗಿ ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್ ಸ್ಥಾನ ತುಂಬಿದ ನ್ಯೂಜಿಲೆಂಡ್ ನಾಯಕ
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

Published On :
ನವದೆಹಲಿ: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ನಿಷೇಧಿಸಿದ ಕಾರಣ ಅವರ ಸ್ಥಾನಕ್ಕೆ ವಿಲಿಯಮ್ಸನ್ ಆಗಮನವಾಗಿದೆ.
"ನಾನು ಈ ಐಪಿಎಲ್ ಸರಣಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಗೊಂಡಿದ್ದೇನೆ. ಇದು ನನಗೆ ಪ್ರತಿಭಾನ್ವಿತ ಆಟಗಾರರ ಜೊತೆ ಆಡುವ ಅದ್ಭುತ ಅವಕಾಶ ನಿಡಿದೆ." ಎಂದು ವಿಲಿಯಮ್ಸನ್ ಹೇಳಿದರು. ಫ್ರಾಂಚೈಸಿಯ ಅಧಿಕೃತ ಟ್ವಿಟರ್ ನಲ್ಲಿ ಇವರ ಈ ಹೇಳಿಕೆ ದಾಖಲಾಗಿದೆ.
ಇದೇ ವೇಳೆ ಹೈದರಾಬಾದ್ ತಂಡದ ತಂಡದ ಸಿಇಒ ಕೆ. ಶಣ್ಮುಗಮ್ "2018 ರ ಐಪಿಎಲ್ಗಾಗಿ ಸನ್ ರೈಸರ್ ಹೈದರಾಬಾದ್ ನಾಯಕನಾಗಿ ಕೇನ್ ವಿಲಿಯಮ್ಸನ್ ಅವರನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ." ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ಇದು ತಂಡದ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರಿಗೆ ತಿಳಿದಿತ್ತು ಎನ್ನಲಾಗಿದೆ. ಈ ಸಂಬಂಧ ತನಿಖೆ ಕೈಗೊಂಡಿದ್ದ ಕ್ರಿಕೆಟ್ ಆಸ್ಟ್ರೇಲಿಯಾ, ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷ ಹಾಗೂ ಬೆನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳುಗಳ ನಿಷೇಧ ಹೇರಿ ತೀರ್ಪು ನೀಡಿದೆ.
ಇದಕ್ಕೆ ಮುನ್ನ ಸನ್ರೈಸರ್ಸ್ ತಂಡದ ನಾಯಕನಾಗಿ ಶಿಖರ್ ಧವನ್ ಆಯ್ಕೆಯಾಗಲಿದ್ದಾರೆಂದು ವರದಿಗಳು ಹರಿದಾಡಿತ್ತು. ಆದರೆ ವಿಲಿಯಮ್ಸನ್ ಗೆ ನಾಯಕತ್ವ ನೀಡಲಾಗಿದೆ. ಇದರೊಡನೆ ಐಪಿಎಲ್ ನಲ್ಲಿ ಈ ಬಾರಿ ಓರ್ವ ವಿದೇಶೀ ನಾಯಕ ಹಾಗೂ ಏಳು ಭಾರತೀಯ ನಾಯಕರಿರಲಿದ್ದಾರೆ.
ವಿಲಿಯಮ್ಸನ್ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ರಣಿಯಲ್ಲಿ ನಿರತರಾಗಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
David Warnerಡೇವಿಡ್ ವಾರ್ನರ್Kane Williamsonಕೇನ್ ವಿಲಿಯಮ್ಸನ್Sunrisers HyderabadIPL 2018ಐಪಿಎಲ್ 2018ಸನ್ರೈಸರ್ಸ್ ಹೈದರಾಬಾದ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


