ಟಿ-20 ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಫಿಂಚ್ ಹೊಸ ವಿಶ್ವದಾಖಲೆ; 76 ಬಾಲ್ ಗಳಲ್ಲಿ 172 ರನ್!
ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

Published On :
ಹರಾರೆ (ಜಿಂಬಾಂಬ್ವೆ): ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ತ್ರಿಕೋಣ ಸರಣಿಯಲ್ಲಿ 76 ಬಾಲ್ ಗಳಲ್ಲಿ 172 ರನ್ ಗಳಿಸುವುದರೊಡನೆ ಫಿಂಚ್ ದಾಖಲೆ ಬರೆದಿದ್ದಾರೆ.
31 ರ ಹರೆಯದ ಫಿಂಚ್ 6 ಬೌಂಡರಿ ಮತ್ತು 10 ಸಿಕ್ಸರ್ ಗಳೊಡನೆ 226.31 ಸ್ಟ್ರೈಕ್ ರೇಟ್ ಗಳಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾಗಿ ಕ್ರೀಸ್ ಗಿಳಿದ ಫಿಂಚ್ ರೋಚಕ ಆಟ ಎದುರಾಳಿಗಳನ್ನು ದಂಗುಬಡಿಸಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾ 229/2 ರನ್ ಗಳಿಸಿದೆ.
2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ 175 ರನ್ ಗಳಿಸಿ ಐಪಿಎಲ್ ಕ್ರಿಕೆಟ್ ದಾಖಲೆ ನಿರ್ಮಾಣ ಮಾಡಿದ್ದರು. ಇದೀಗ ಫಿಂಚ್ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿಅವರಾಗಿ ಗುರುತಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


