ಟಿ-20 ಕ್ರಿಕೆಟ್

T20 Cricket: ನಾಯಕತ್ವದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮೊದಲ ಪೋಸ್ಟ್ ವೈರಲ್!
ಸೂರ್ಯ ಕುಮಾರ್ ಯಾದವ್ ವಿಶ್ವಕಪ್ ಮತ್ತು ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ನಂತರ ನಾಯಕತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು.

ಟಿ20 ಕ್ರಿಕೆಟ್ ಮಾದರಿಗೆ ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್ ನಿವೃತ್ತಿ ಘೋಷಣೆ!
ಭಾರತ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮುನ್ನಾ ದಿನವಾದ ಇಂದು ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದರು.ಶಕೀಬ್ ಅಲ್ ಹಸನ್, ಬಾಂಗ್ಲಾದೇಶ ಪರ 129 ಟಿ20 ಪಂದ್ಯಗಳನ್ನು ಆಡಿದ್ದು, ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

'ಒಂದೇ ಓವರ್‌ನಲ್ಲಿ 6 ಸಿಕ್ಸರ್': T20ಯಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ನೇಪಾಳದ ಐರಿ!
ನೇಪಾಳದ ದಿಪೇಂದ್ರ ಸಿಂಗ್ ಐರಿ ಇಲ್ಲಿ ನಡೆಯುತ್ತಿರುವ ಎಸಿಸಿ ಪುರುಷರ ಪ್ರೀಮಿಯರ್ ಕಪ್ T20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಶನಿವಾರ ಆತಿಥೇಯ ಕತಾರ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದರು. ಈ ಮೂಲಕ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ , ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಇಂಗ್ಲೆಂಡ್ ನೀಡಿದ್ದ 160 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 18. 2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.

ಉಗ್ರರ ಬಗ್ಗೆ ಪಾಕ್ ಮಾಹಿತಿ: ಆಂತರಿಕ ಭದ್ರತೆ ಪರಿಶೀಲನೆಗೆ ಸಿಂಗ್ ಸಭೆ
ಪಾಕಿಸ್ತಾನದಿಂದ 10 ಉಗ್ರರು ಭಾರತದೊಳಗೆ ನುಸುಳಿರುವುದಾಗಿ ಪಾಕಿಸ್ತಾನ್ ಅಧಿಕಾರಿಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆದಿರುವುದಾಗಿ ತಿಳಿದುಬಂದಿದೆ...

