ಪತ್ನಿ ಅನುಷ್ಕಾ ಕುರಿತು ಟ್ರಾಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ ಕೊಹ್ಲಿ
ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಕೊಹ್ಲಿ ಟಾಂಗ್ ನೀಡಿದ್ದು, ಸೆಂಚೂರಿಯನ್ ನಲ್ಲಿ 150 ರನ್ ಸಿಡಿಸಿ ಪತ್ನಿ ನೀಡಿದ್ದ ಮದುವೆ ಉಂಗುರಕ್ಕೆ ಮೈದಾನದಲ್ಲೇ ಮುತ್ತು ಕೊಟ್ಟಿದ್ದಾರೆ.

Published On :
ಸೆಂಚೂರಿಯನ್: ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಕೊಹ್ಲಿ ಟಾಂಗ್ ನೀಡಿದ್ದು, ಸೆಂಚೂರಿಯನ್ ನಲ್ಲಿ 150 ರನ್ ಸಿಡಿಸಿ ಪತ್ನಿ ನೀಡಿದ್ದ ಮದುವೆ ಉಂಗುರಕ್ಕೆ ಮೈದಾನದಲ್ಲೇ ಮುತ್ತು ಕೊಟ್ಟಿದ್ದಾರೆ.
ಈ ಹಿಂದೆ ಕೇಪ್ ಟೌನ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳಪೆ ಆಟವಾಡಿದ್ದರು.. ಈ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಕ್ರೀಡಾಂಗಣದಲ್ಲಿದ್ದರು. ಅಂದು ಅನುಷ್ಕಾ ಕೊಹ್ಲಿ ಜೊತೆಗಿದ್ದರಿಂದಲೇ ಕೊಹ್ಲಿ ಕಳಪೆ ಆಟವಾಡಿದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು, ಟ್ವಿಟರ್ ನಲ್ಲಿ ಅನುಷ್ಕಾರನ್ನು ವ್ಯಾಪಕ ಟ್ರೋಲ್ ಮಾಡಲಾಗಿತ್ತು. ಆದರೆ ಪತ್ನಿ ಅನುಷ್ಕಾ ಕುರಿತು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಕೊಹ್ಲಿ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಭರ್ಜರಿ ಆಟವಾಡಿದ್ದು, 150 ರನ್ ಗಳಿಸಿದ್ದರು. 150 ರನ್ ಸಿಡಿಸಿದ ಸಂಭ್ರಮಾಚರಣೆ ವೇಳೆ ಕೊಹ್ಲಿ ತಾವು ಮದುವೆಯಲ್ಲಿ ಅನುಷ್ಕಾರಿಂದ ಪಡೆದಿದ್ದ ವೆಡ್ಡಿಂಗ್ ರಿಂಗ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಲ್ಲದೇ ಅದಕ್ಕೆ ಕ್ರೀಡಾಂಗಣದಲ್ಲೇ ಮುತ್ತು ನೀಡಿ ನೇರವಾಗಿ ಅನುಷ್ಕಾ ಬೆಂಬಲಕ್ಕೆ ನಿಂತರು. ಆ ಮೂಲಕ ಟ್ರೋಲ್ ಮಾಡುತ್ತಿದ್ದವರಿಗೆ ಕೊಹ್ಲಿ ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಇನ್ನು ಕೊಹ್ಲಿ ವೆಡ್ಡಿಂಗ್ ರಿಂಗ್ ಗೆ ಕಿಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Virat Kohli proudly showed everyone his engagement ring and kissed it after scoring 150* against South Africa today
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Twitterಟ್ವಿಟರ್Anushka Sharmaಅನುಷ್ಕಾ ಶರ್ಮಾVirat KohliIndia vs south africaಭಾರತ ವರ್ಸಸ್ ದಕ್ಷಿಣ ಆಫ್ರಿಕಾCricket Offbeatಕ್ರಿಕೆಟ್ ಸ್ವಾರಸ್ಯCenturionಸೆಂಚೂರಿಯನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


