ಕ್ರಿಕೆಟ್

ಎರಡನೇ ಟೆಸ್ಟ್: ಕೊಹ್ಲಿ ಶತಕದ ಆಸರೆ, 307 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್ ಆಗಿದೆ.

ಎರಡನೇ ಟೆಸ್ಟ್: ಕೊಹ್ಲಿ ಶತಕದ ಆಸರೆ, 307 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್
ವಿರಾಟ್ ಕೊಹ್ಲಿ
Published On :
ಸೆಂಚೂರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್ ಆಗಿದೆ. 
ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 335 ರನ್ ಗಳಿಗೆ ಸರ್ವಪತನ ಕಂಡಿತು. ನಂತರ ಇನ್ನಿಂಗ್ಸ್  ಆರಂಭಿಸಿರುವ ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಆಫ್ರಿಕಾ 28 ರನ್ ಮುನ್ನಡೆ ಸಾಧಿಸಿದೆ. ಇನ್ನು ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದ್ದು, ಡಿವಿಲಿಯರ್ಸ್ ಅಜೇಯ 31 ಮತ್ತು ಎಲ್ಗರ್ ಅಜೇಯ 19 ರನ್ ಗಳಿಸಿ ಆಡುತ್ತಿದ್ದಾರೆ. 
ಎರಡನೇ ದಿನದಾಟದಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತ್ತು ಮೂರನೇ ದಿನದಾಟ ಪ್ರಾರಂಭಿಸಿದ ವಿರಾಟ್ ಕೊಹ್ಲಿ ಭರ್ಜರಿ 153 ರನ್ ಸಿಡಿಸಿದ್ದು ಭಾರತ 300 ಗಡಿ ದಾಟಲು ಸಾಧ್ಯವಾಯಿತು. 
ಟೀಂ ಇಂಡಿಯಾ ಪರ ಮುರಳಿ ವಿಜಯ್ 46, ಕೆಎಲ್ ರಾಹುಲ್ 10, ಚೇತೇಶ್ವರ ಪೂಜಾರ 0, ರೋಹಿತ್ ಶರ್ಮಾ 10, ಪಾರ್ಥಿವ್ ಪಟೇಲ್ 19 ವಿರಾಟ್ ಕೊಹ್ಲಿ 153 ಮತ್ತು ಹಾಗೂ ಆರ್ ಅಶ್ವಿನ್ 38 ರನ್ ಗಳಿಸಿದ್ದಾರೆ. ಆಫ್ರಿಕಾ ಪರ ಮಾರ್ಕೆಲ್ 4 ವಿಕೆಟ್ ಪಡೆದಿದ್ದಾರೆ. 
ಮೊದಲ ಇನ್ನಿಂಗ್ಸ್ ನಲ್ಲಿ ಆಫ್ರಿಕಾ ಪರ ಎಲ್ಗರ್ 31, ಮಾರ್ಕ್ ರಾಮ್ 94, ಆಶೀಂ ಹಾಮ್ಲಾ 82, ಡುಪ್ಲೇಸಿಸ್ 63 ರನ್ ಗಳಿಸಿದ್ದಾರೆ. ಭಾರತ ಪರ ಆರ್ ಅಶ್ವಿನ್ 4, ಇಶಾಂತ್ ಶರ್ಮಾ 3 ಮತ್ತು ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.