ಕ್ರಿಕೆಟ್

ಮನೀಷ್ ಪಾಂಡೆ ಮೇಲೆ 'ಕೂಲ್' ಧೋನಿ ಸಿಟ್ಟಾಗಿದ್ದು ಯಾಕೆ ಗೊತ್ತಾ?

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಖತ್ ಕೂಲ್ ಆಟಗಾರ ಎಂದು ಖ್ಯಾತಿ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ...

ಮನೀಷ್ ಪಾಂಡೆ ಮೇಲೆ 'ಕೂಲ್' ಧೋನಿ ಸಿಟ್ಟಾಗಿದ್ದು ಯಾಕೆ ಗೊತ್ತಾ?
ಮನೀಷ್ ಪಾಂಡೆ-ಎಂಎಸ್ ಧೋನಿ
Published On :

ಜೋಹಾನ್ಸ್ ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಖತ್ ಕೂಲ್ ಆಟಗಾರ ಎಂದು ಖ್ಯಾತಿ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಮನೀಷ್ ಪಾಂಡೆ ಮೇಲೆ ಮೈದಾನದಲ್ಲಿ ಸಿಟ್ಟಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೆಬ್ರವರಿ 21ರಂದು ನಡೆದ ಟಿ20 ಪಂದ್ಯದಲ್ಲಿ ಧೋನಿ ಅವರು ಬ್ಯಾಟಿಂಗ್ ಮಾಡುವಾಗ ಪಿಚ್ ನಲ್ಲಿ ಮಿಂಚಿನಂತೆ ಓಡಿ ರನ್ ಗಳಿಸುವಂತೆ ಮನೀಷ್ ಪಾಂಡೆಗೆ ಸೂಚನೆ ನೀಡಿದ್ದರು. 20ನೇ ಓವರ್ ನ ಮೊದಲ ಎಸೆತದಲ್ಲಿ ಎರಡನೇ ರನ್ ಓಡಲು ಪಾಂಡೆ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಧೋನಿ ಪಾಂಡೆಯನ್ನು ಕರೆದು ತಪ್ಪು ತಿದ್ದಿಕೊಳ್ಳುವಂತೆ ಹೇಳಿದರು.

ಇನ್ನು ಧೋನಿ ಮನೀಷ್ ಪಾಂಡೆಗೆ ಹೇಳಿರುವ ಮಾತುಗಳು ಸ್ಟಂಪ್ ನ ಮೈಕ್ ನಲ್ಲಿ ದಾಖಲಾಗಿವೆ. 36 ವರ್ಷದ ಧೋನಿ ಈ ವಯಸ್ಸಿನಲ್ಲೂ ಬ್ಯಾಟಿಂಗ್ ಮಾಡುವಾಗ ಪಿಚ್ ನಲ್ಲಿ ಮಿಂಚಿನಂತೆ ಓಡಿ ರನ್ ಗಳಿಸಿ ಎಲ್ಲರ ಗಮನ ಸೆಳೆಯುತ್ತಾರೆ.

ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ ಜತೆಯಾದ ಮನೀಷ್ ಪಾಂಡೆ ಹಾಗೂ ಎಂಎಸ್ ಧೋನಿ ಐದನೇ ವಿಕೆಟ್ ಜತೆಯಾಟಕ್ಕೆ 98 ರನ್ ಗಳಿಸಿ ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು. ಆದರೆ ದಕ್ಷಿಣ ಆಫ್ರಿಕಾ ಪರ ಕ್ಲಾಸೇನ್ ವಿಜೃಂಭಿಸಿದ್ದು ತಂಡ 6 ವಿಕೆಟ್ ಗಳಿಂದ ಜಯ ಗಳಿಸಲು ಕಾರಣರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.