ವಿರಾಟ್ ಕೊಹ್ಲಿಯಷ್ಟು ತಾಂತ್ರಿಕವಾಗಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ: ಸ್ಟೀವ್ ವಾ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ಹಾಡಿ ಹೊಗಳಿರುವ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಸ್ಟೀವ್ ವಾ, ಕೊಹ್ಲಿಯಷ್ಟು ಕ್ರಿಕೆಟ್ ತಂತ್ರಗಾರಿಕೆಯಲ್ಲಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ ಎಂದು ಹೇಳಿದ್ದಾರೆ.

Published On :
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಮತ್ತೊಮ್ಮೆ ಹಾಡಿ ಹೊಗಳಿರುವ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಸ್ಟೀವ್ ವಾ, ಕೊಹ್ಲಿಯಷ್ಟು ಕ್ರಿಕೆಟ್ ತಂತ್ರಗಾರಿಕೆಯಲ್ಲಿ ಪಕ್ವವಾಗಿರುವ ಮತ್ತೊಬ್ಬ ಆಟಗಾರನಿಲ್ಲ ಎಂದು ಹೇಳಿದ್ದಾರೆ.
ಆಂಗ್ಲ ಕ್ರೀಡಾ ವೆಬ್ ಸೈಟಿನೊಂದಿಗೆ ಮಾತನಾಡಿರುವ ಸ್ಟೀವ್ ವಾ, ವಿರಾಟ್ ಕೊಹ್ಲಿ ಒಬ್ಬ ಅತ್ಯುತ್ತಮ ಟೆಸ್ಟ್ ಆಟಗಾರನಾಗಿದ್ದಾರೆ. ನಾನು ಕಂಡಂತೆ ವಿಶ್ವ ಕ್ರಿಕೆಟ್ ನಲ್ಲಿ ಕೊಹ್ಲಿಗಿಂತ ಉತ್ತಮ ಟೆಕ್ನಿಕ್ ಇರುವ ಆಟಗಾರ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜರಾದ ಬ್ರಿಯನ್ ಲಾರಾ ಹಾಗೂ ವಿವಿಎನ್ ರಿಚರ್ಡ್‌ಗೆ ಹೋಲಿಸದ ವಾ, ಈ ಎಲ್ಲಾ ಆಟಗಾರರಿಗಿದ್ದ ಟೆಕ್ನಿಕ್ ಗಳು ವಿರಾಟ್ ಕೊಹ್ಲಿಗೆ ಒಲಿದು ಬಂದಿದೆ ಹೇಳಿದ್ದಾರೆ. 'ಕೊಹ್ಲಿ ಯಾವುದೇ ರೀತಿಯ ಪಿಚ್ ನಲ್ಲೂ ಚೆನ್ನಾಗಿ ಆಟವಾಡಬಲ್ಲರು. ನನ್ನ ಪ್ರಕಾರ ವಿಶ್ವ ಕ್ರಿಕೆಟ್‌ನ ಎಲ್ಲಾ ಟೆಕ್ನಿಕ್ ಗಳು ಕೊಹ್ಲಿಗೆ ಒಲಿದು ಬಂದಿದೆ. ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಆಟಗಾರರಾದರೂ ಎಬಿಡಿ ಕೊಹ್ಲಿಯ ಹಾಗೆ ಟೆಸ್ಟ್ ಆಡಿಲ್ಲ. ಹಾಗಾಗಿ ಕೊಹ್ಲಿ ವಿಶ್ವದ ಅತ್ಯುತ್ತಮ ಟೆಸ್ಟ್ ಆಟಗಾರರಲ್ಲಿ ಒಬ್ಬರು ಎಂದು ವಾ ಹೇಳಿದ್ದಾರೆ.
ಒಂದು ಕಾಲದಲ್ಲಿ ವಿವಿಎನ್ ರಿಚರ್ಡ್ಸ್, ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಉತ್ತಮ ಆಟಗಾರರಾಗಿದ್ದರು. ಈಗ ಅವರ ಸ್ಥಾನವನ್ನು ಕೊಹ್ಲಿ ತುಂಬುತ್ತಿದ್ದಾರೆ ಎಂದು ಸ್ಟೀವ್ ವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Londonಲಂಡನ್Virat Kohliವಿರಾಟ್ ಕೊಹ್ಲಿSteve Waughಸ್ಟೀವ್ ವಾCricket Techniqesಕ್ರಿಕೆಟ್ ತಂತ್ರಗಾರಿಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


