ಕ್ರಿಕೆಟ್

ಡಿವಿಲಿಯರ್ಸ್ ಕುಟುಂಬದ ಆಟೋ ರೈಡ್, ಈ ಸಲ ಕಪ್ ನಮ್ದೇ ಎಂದ ಜೂನಿಯರ್ ಎಬಿಡಿ

ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಆರ್ ಸಿಬಿ ತಂಡ ಸಿದ್ಧತೆ ನಡೆಸಿರುವಂತೆಯೇ ಇತ್ತ ಬೆಂಗಳೂರು ಬೀದಿಗಳಲ್ಲಿ ಕ್ರಿಕೆಟಿಗ ಎಬಿ ಡಿವಿಲಿರ್ಸ್ ತನ್ನ ಪತ್ನಿ ಮತ್ತು ಮಗನೊಂದಿಗೆ ಆಟೋದಲ್ಲಿ ಸುತ್ತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

ಡಿವಿಲಿಯರ್ಸ್ ಕುಟುಂಬದ ಆಟೋ ರೈಡ್, ಈ ಸಲ ಕಪ್ ನಮ್ದೇ ಎಂದ ಜೂನಿಯರ್ ಎಬಿಡಿ
ಆಟೋದಲ್ಲಿ ಎಬಿಡಿ ಜಾಲಿ ರೈಡ್
Published On :
ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಆರ್ ಸಿಬಿ ತಂಡ ಸಿದ್ಧತೆ ನಡೆಸಿರುವಂತೆಯೇ ಇತ್ತ ಬೆಂಗಳೂರು ಬೀದಿಗಳಲ್ಲಿ ಕ್ರಿಕೆಟಿಗ ಎಬಿ ಡಿವಿಲಿರ್ಸ್ ತನ್ನ ಪತ್ನಿ ಮತ್ತು ಮಗನೊಂದಿಗೆ ಆಟೋದಲ್ಲಿ ಸುತ್ತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಕೆಲ ಅಭಿಮಾನಿಗಳು ಬೈಕ್ ನಲ್ಲಿ ಆಟೋ ಹಿಂಬಾಲಿಸುತ್ತಿರುವಾಗಲೇ ಎಬಿ ಡಿವಿಲಿಯರ್ಸ್ ಮತ್ತು ಅವರ ಪತ್ನಿ, ಪುತ್ರ ಮಗನೊಂದಿಗೆ ನಗರದ ಹಲವಡೆ ಸುತ್ತಾಡಿ ಸಂಭ್ರಮಿಸಿದ್ದಾರೆ. 'ಈ ಸಲ ಕಪ್‌ ನಮ್ದೆ' ಎಂದು ಹೇಳುವ ಮೂಲಕ ಮಾರ್ಗಮಧ್ಯೆ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮುಖ್ಯವಾಗಿ ಡಿವಿಲಿಯರ್ಸ್ ಪತ್ನಿ ಮತ್ತು ಜೂನಿಯರ್ ಡಿವಿಲಿಯರ್ಸ್ ಈ ಸಲ ಕಪ್ ನಮ್ದೇ ಎಂದು ಹೇಳಿರುವುದು  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
‘ಈ ಸಲ ಕಪ್‌ ನಮ್ದೆ’ ಎಂಬುದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಘೋಷ ವಾಕ್ಯವಾಗಿದೆ. 
ಇದಕ್ಕೂ ಮೊದಲು ತನ್ನ ಪುಟ್ಟ ಬ್ಯಾಟ್‌ನಲ್ಲಿ ಅಪ್ಪ ಹಾಕಿದ ಎಸೆತಗಳನ್ನು ಆಡಿದ ಜೂನಿಯರ್ ಎಬಿಡಿ, ಹೆಚ್ಚು ಹೊತ್ತು ಫುಟ್‌ಬಾಲ್ ಆಟದಲ್ಲಿ ಸಮಯ ಕಳೆದರು. ತಂಡದ ಇನ್ನಿತರ ಆಟಗಾರರೊಂದಿಗೆ ಮಾತನಾಡುತ್ತ, ತುಂಟಾಟ ಆಡಿದ ಜೂನಿಯರ್ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.