ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವಂತೆ ಧೋನಿ ಸಲಹೆ ನೀಡಿದ್ದು ಯಾವ ಎದುರಾಳಿ ಆಟಗಾರನಿಗೆ ಗೊತ್ತಾ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್...

Published On :
ಹೈದರಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಗೆ ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಲು ನೆರವಾಗಿದ್ದು ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಅಂತೆ. ಹೀಗಂತೆ ಸ್ವತಃ ರಶೀದ್ ಖಾನ್ ಅವರೇ ತಿಳಿಸಿದ್ದಾರೆ.
ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 4 ರನ್ ಗಳಿಂದ ರೋಚಕ ಸೋಲು ಅನುಭವಿಸಿತ್ತು. ಆದರೆ ಕೊನೆಯ ಓವರ್ ನಲ್ಲಿ ಬ್ಯಾಟಿಂಗ್ ಮಾಡಿದ್ದ ರಶೀದ್ ಖಾನ್ 4 ಎಸೆತಗಳಲ್ಲಿ 17 ರನ್ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ರಶೀದ್ ತಾವು ಕ್ರೀಸ್ ಗೆ ಬಂದ ಸಂದರ್ಭದಲ್ಲಿ ಧೋನಿಯನ್ನು ಕೊನೆಯ ಹಂತದಲ್ಲಿ ಒತ್ತಡ ಇರುವಾಗ ಹೇಗೆ ಸಿಕ್ಸರ್ ಸಿಡಿಸುವುದು ಎಂದು ಕೇಳಿದೆ. ಆಗ ಧೋನಿ ನೀಡಿದ ಸಲಹೆಯನ್ನು ಅನುಸರಿಸಿದ್ದಕ್ಕೆ ಎರಡು ಸಿಕ್ಸರ್ ಬಾರಿಸಲು ನೆರವಾಯಿತು. ಆದರೆ ಅವರ ರೀತಿಯಲ್ಲಿ ಫಿನಿಶ್ ಮಾಡಲು ಮಾತ್ರ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 182 ರನ್ ಗಳಿಗೆ ಆಲೌಟ್ ಆಗಿತ್ತು. 183 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ನಿಗಿದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 178 ಗಳಿಸಿ 4 ರನ್ ಗಳಿಂತ ಸೋಲು ಕಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS Dhoniಎಂಎಸ್ ಧೋನಿChennai Super KingsSunrisers Hyderabadಸನ್ ರೈಸರ್ಸ್ ಹೈದರಾಬಾದ್ಚೆನ್ನೈ ಸೂಪರ್ ಕಿಂಗ್ಸ್IPL 2018ಐಪಿಎಲ್ 2018Rashid Khanರಶೀದ್ ಖಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


