ಕ್ರಿಕೆಟ್

ವಿಶ್ವಕಪ್ ಗೆದ್ದರೆ ಶರ್ಚ್ ಬಿಚ್ಚುವೆ; ಗಂಗೂಲಿ ಮಾತನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ

2019ರ ವಿಶ್ವಕಪ್ ಗೆದ್ದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರು ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆಂದು ಗಂಗೂಲಿಯವರ ಮಾತನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ...

ವಿಶ್ವಕಪ್ ಗೆದ್ದರೆ ಶರ್ಚ್ ಬಿಚ್ಚುವೆ; ಗಂಗೂಲಿ ಮಾತನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ
Published On :
ಕೋಲ್ಕತಾ; 2019ರ ವಿಶ್ವಕಪ್ ಗೆದ್ದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರು ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆಂದು ಗಂಗೂಲಿಯವರ ಮಾತನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ. 
2002 ನಾಟ್ ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿಯವರು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆಂದು ಗಂಗೂಲಿಯವರು ಈ ಹಿಂದೆ ಹೇಳಿದ್ದರು. ಇದೀಗ ಗಂಗೂಲಿಯವರ ಮಾತನ್ನು ಸ್ವತಃ ಕೊಹ್ಲಿಯವರು ಒಪ್ಪಿಕೊಕಂಡಿದ್ದಾರೆ. 
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಗಂಗೂಲಿಯವರು ಭಾರತ ವಿಶ್ವಕಪ್ ಗೆದ್ದರೆ, ಕೊಲ್ಹಿ ಲಂಡನ್ ನ ಆಕ್ಸ್ ಫರ್ಡ್ ರಸ್ತೆಯಲ್ಲಿ ಶರ್ಟ್ ಬಿಚ್ಚಿ ಓಡಾಡಲಿದ್ದಾರೆ. ಅವರ ಸಿಕ್ಸ್ ಪ್ಯಾಕ್ ದೇಹಲವನ್ನು ಸೆರೆಹಿಡಿಯಲು ಕ್ಯಾಮೆರಾಗಳು ಸಿದ್ಧವಿರಬೇಕೆಂದು ಮತ್ತೊಮ್ಮೆ ಹೇಳಿದ್ದರು. 
ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಹ್ಲಿಯವರು, ಶೇ.120ರಷ್ಟು ಖಚಿತ. ಶರ್ಟ್ ಬಿಚ್ಚಿ ಓಡಲಿದ್ದೇನೆ. ನಾನೊಬ್ಬನೇ ಅಲ್ಲ, ಖಂಚಿತವಾಗಿಯೂ ಹಾರ್ದಿಕ್ ಪಾಂಡ್ಯ ಜತೆಗಿರಲಿದ್ದಾರೆ. ಬೂಮ್ರಾಗೂ ಸಿಕ್ಸ್ ಪ್ಯಾಕ್ ಇದೆ. ಇನ್ನೂ ಏನೇತರು ನನ್ನನ್ನು ಕೂಡಿಕೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.