ಕ್ರಿಕೆಟ್

ಬ್ಯಾಟಿಂಗ್ ನಲ್ಲಿ ಪಾಂಡ್ಯಾಗೆ ಬಡ್ತಿ ಕೋಚ್ ರವಿಶಾಸ್ತ್ರಿ ಚಿಂತನೆಯಾಗಿತ್ತು: ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಕಾರಣವಾದ ಹಾರ್ದಿಕ್ ಪಾಂಡ್ಯಾಗೆ ಬ್ಯಾಟಿಂಗ್ ನಲ್ಲಿ ಬಡ್ತಿ ನೀಡುವುದು ಕೋಚ್ ರವಿಶಾಸ್ತ್ರಿ ಅವರ ಯೋಜನೆಯಾಗಿತ್ತು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಬ್ಯಾಟಿಂಗ್ ನಲ್ಲಿ ಪಾಂಡ್ಯಾಗೆ ಬಡ್ತಿ ಕೋಚ್ ರವಿಶಾಸ್ತ್ರಿ ಚಿಂತನೆಯಾಗಿತ್ತು: ವಿರಾಟ್ ಕೊಹ್ಲಿ
ಸಂಗ್ರಹ ಚಿತ್ರ
Published On :
ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಕಾರಣವಾದ ಹಾರ್ದಿಕ್ ಪಾಂಡ್ಯಾಗೆ ಬ್ಯಾಟಿಂಗ್ ನಲ್ಲಿ ಬಡ್ತಿ ನೀಡುವುದು ಕೋಚ್ ರವಿಶಾಸ್ತ್ರಿ ಅವರ ಯೋಜನೆಯಾಗಿತ್ತು ಎಂದು ಭಾರತ  ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಿನ್ನೆ ಇಂದೋರ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ದ ನಡೆದ 3ನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ಸ್ಫೋಟಕ 78 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಈ ಬಗ್ಗೆ ಇಂದೋರ್ ನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಾರಂತಹ ಆಲ್ ರೌಂಡರ್ ಗಳು ಎಂದಿಗೂ ತಂಡದ ದೊಡ್ಡ ಆಸ್ತಿಯಾಗಿರುತ್ತಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲೂ  ಪಾಂಡ್ಯಾ ಉತ್ತಮ ಪ್ರದರ್ಶನ ನೀಡಬಲ್ಲರು ಎಂದು ಹೇಳಿದ್ದಾರೆ.

"ಯಾವುದೇ ತಂಡವಿರಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಆಲ್ ರೌಂಡರ್ ಗಳ ಆ ತಂಡಕ್ಕೆ ಆಸರೆಯಾಗಿ ನಿಲ್ಲಬಲ್ಲರು. 3ನೇ ಪಂದ್ಯದ ಗೆಲುವಿನಿಂದಾಗಿ ನಿಜಕ್ಕೂ ತೃಪ್ತಿಯಾಗಿದೆ. ಇನ್ನು ಹಾರ್ದಿಕ್ ಪಾಂಡ್ಯಾ ಅವರನ್ನು 4ನೇ  ಕ್ರಮಾಂಕದಲ್ಲಿ ಕಣಕ್ಕಿಳಿಸುವ ಯೋಜನೆ ಕೋಚ್ ರವಿಶಾಸ್ತ್ರಿ ಅವರದ್ದಾಗಿತ್ತು. ಸಾಮಾನ್ಯವಾಗಿ ದೊಡ್ಡ ಮೊತ್ತದ ಗುರಿಗಳನ್ನು ಬೆನ್ನು ಹತ್ತುವಾಗ ಕೆಳ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಆಟಗಾರರ ಅವಶ್ಯಕತೆ ಇರುತ್ತದೆ. ಈ  ವಿಚಾರದಲ್ಲಿ ಹಾರ್ದಿಕ್ ಪಾಂಡ್ಯಾ ತಂಡದ ಆಸ್ತಿಯಾಗಬಲ್ಲರು. ಇದೇ ಕಾರಣಕ್ಕೆ ಮನೀಷ್ ಪಾಂಡೆ ಹಾಗೂ ಧೋನಿ ಅವರಿಗೂ ಮೊದಲೇ ಹಾರ್ದಿಕ್ ಪಾಂಡ್ಯಾ ಅವರನ್ನು ಕಣಕ್ಕಿಳಿಸಲಾಯಿತು.

ಪ್ರಮುಖವಾಗಿ ಆಸ್ಟ್ರೇಲಿಯಾದ ಸ್ಪಿನ್ನರ್ ಗಳನ್ನು ಎದುರಿಸಲು ಈ ಯೋಜನೆ ರೂಪಿಸಲಾಗಿತ್ತು. ಇದರಲ್ಲೂ ಪಾಂಡ್ಯಾ ಯಶಸ್ಸು ಕಂಡು ಎಂದಿನ ತಮ್ಮ ಸ್ಫೋಟಕ ಆಟವನ್ನು ಮುಂದುವರೆಸಿದರು ಎಂದು ಕೊಹ್ಲಿ ಹೇಳಿದರು.

ಸ್ಪಿನ್ನರ್ ಗಳ ಹಾಡಿಹೊಗಳಿದ ಕೊಹ್ಲಿ
ಇದೇ ವೇಳೆ ಆಸ್ಚ್ರೇಲಿಯಾದ ಬೃಹತ್ ಮೊತ್ತದ ಹೊರತಾಗಿಯೂ ನಾಯಕ ಕೊಹ್ಲಿ ಭಾರತದ ಸ್ಪಿನ್ನರ್ ಗಳನ್ನು ಹಾಡಿ ಹೊಗಳಿದ್ದಾರೆ. ಆಸ್ಟ್ಲೇಲಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮೊದಲ 35 ಓವರ್ ಸ್ಮಿತ್ ಪಡೆ  ಸ್ಫೋಟಕ ಆಟವಾಡಿತ್ತು. ಆದರೆ ಆ ತಂಡದ ಎರಡು ಮೂರು ವಿಕೆಟ್ ಬಿದ್ದ ಬಳಿಕ ಅವರ ರನ್ ವೇಗಕ್ಕೆ ನಾವು ಕಡಿವಾಣ ಹಾಕಿದೆವು. ಇಂದೋರ್ ಪಿಚ್ ಬ್ಯಾಟಿಂಗ್ ಸಹಕಾರಿಯಾಗಿದ್ದು, 330ರಿಂದ 340 ರನ್ ಗಳನ್ನು ಕಲೆಹಾಕ  ಬಹುದಾಗಿದೆ. ನಮ್ಮ ಸ್ಪಿನ್ನರ್ ಗಳ ನೆರವಿನಿಂದಾಗಿ ಆಸ್ಟ್ರೇಲಿಯಾ ತಂಡವನ್ನು 294ಕ್ಕೆ ಸೀಮಿತಗೊಳಿಸಿದೆವು. ಆಸ್ಟ್ರೇಲಿಯಾ ತಂಡ 30-40 ರನ್ ಕೊರತೆ ಎದುರಿಸಿತು ಎಂದು ಕೊಹ್ಲಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.