ಕ್ರಿಕೆಟ್

ಮೊಹಾಲಿ ಅದ್ಭುತ ಇನ್ನಿಂಗ್ಸ್ ಬಗ್ಗೆ ಕೊಹ್ಲಿ ಹೇಳಿದ್ದೇನು..?

ಮೊಹಾಲಿಯಲ್ಲಿ ಭಾನುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟುವ ಮೂಲಕ ಭಾರತದ ಸೆಮೀಸ್ ಹಾದಿಯನ್ನು ಸುಗಮಗೊಳಿಸಿದ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ, ಇದು ತಮ್ಮ ವೃತ್ತಿ ಜೀವನದ ಮರೆಯಲಾಗದ ಉತ್ತಮ ಇನ್ನಿಂಗ್ಸ್ ಎಂದು ಬಣ್ಣಿಸಿದ್ದಾರೆ.

ಮೊಹಾಲಿ ಅದ್ಭುತ ಇನ್ನಿಂಗ್ಸ್ ಬಗ್ಗೆ ಕೊಹ್ಲಿ ಹೇಳಿದ್ದೇನು..?
ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
Published On :

ಮೊಹಾಲಿ: ಮೊಹಾಲಿಯಲ್ಲಿ ಭಾನುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟುವ ಮೂಲಕ ಭಾರತದ ಸೆಮೀಸ್ ಹಾದಿಯನ್ನು ಸುಗಮಗೊಳಿಸಿದ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ, ಇದು ತಮ್ಮ ವೃತ್ತಿ ಜೀವನದ ಮರೆಯಲಾಗದ ಉತ್ತಮ ಇನ್ನಿಂಗ್ಸ್ ಎಂದು ಬಣ್ಣಿಸಿದ್ದಾರೆ.

ಪಂದ್ಯದ ಬಳಿಕ ಭಾವನಾತ್ಮಕವಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಬಹುಶಃ ಈ ಇನ್ನಿಂಗ್ಸ್ ನನ್ನ ವೃತ್ತಿ ಜೀವನದ ಮೊದಲ ಮೂರು ಸ್ಥಾನದಲ್ಲಿಡಲು ನಾನು ಬಯಸುತ್ತೇನೆ. ಟೀಂ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಗೌರವ ನನಗೆ ದೊರೆತದ್ದರಿಂದ ಪ್ರಸ್ತುತ ನಾನು ಕೊಂಚ ಭಾವುಕನಾಗಿದ್ದೇನೆ. ಹೀಗಾಗಿ ಈ ಇನ್ನಿಂಗ್ಸ್ ನನ್ನ ಪಾಲಿಗೆ ವಿಶೇಷವಾಗಿದ್ದು, ಇದನ್ನು ನನ್ನ ಟಿ20 ವೃತ್ತಿ ಜೀವನ ಅತ್ಯಂತ ಮಹತ್ವದ ಇನ್ನಿಂಗ್ಸ್ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಆಡುವಾಗ ನಿಜಕ್ಕೂ ನಾವು ಶೇ.100ರಷ್ಟುಸಾಮರ್ಥ್ಯ ಪ್ರದರ್ಶನ ಮಾಡಿದಾಗ ಮಾತ್ರ ಗೆಲುವು ಸಾಧ್ಯ. ನಿಜಕ್ಕೂ ಮೊಹಾಲಿ ಪಂದ್ಯ ನಮಗೆ ಕ್ವಾರ್ಟರ್ ಫೈನಲ್ ಪಂದ್ಯವಾಗಿತ್ತು. ಹೀಗಾಗಿ ನಾವು ಈ ಚಾಲೆಂಜ್ ಅನ್ನು ತೆಗೆದುಕೊಳ್ಳಲೇಬೇಕಿತ್ತು. ಪ್ರಸಕ್ತ ಟಿ20 ಸರಣಿಯಲ್ಲಿ ನಮ್ಮ ಮೇಲೆ ಸಾಕಷ್ಟು ಭರವಸೆಗಳಿವೆ. ಅಲ್ಲದೆ ನಾವು ತವರಿನಲ್ಲಿ ಆಡುತ್ತಿರುವ ಒತ್ತಡವೂ ಕೂಡ ಇದ್ದು, ಇದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಭಾರತದ ಪಂದ್ಯ ವೀಕ್ಷಿಸಲು ಪ್ರತಿಯೊಂದು ಕ್ರೀಡಾಂಗಣದಲ್ಲೂ ಸಾವಿರಾರು ಮಂದಿ ಭಾರತೀಯರು ಸೇರುತ್ತಾರೆ. ಅವರನ್ನು ನಮ್ಮ ಉತ್ತಮ ಆಟದ ಮೂಲಕ ರಂಜಿಸುವುದು ನಮ್ಮ ಕರ್ತವ್ಯ ಎಂದು ಕೊಹ್ಲಿ ಹೇಳಿದ್ದಾರೆ.

ಪ್ರಸ್ತುತ ಭಾರತ ತಂಡದ ಮೇಲಿನ ನಿರೀಕ್ಷೆಗಳನ್ನು ನೋಡಿದರೆ ನನಗೇನು ಹೇಳುವುದೋ ತಿಳಿಯುತ್ತಿಲ್ಲ. ನಿಜಕ್ಕೂ ನಮ್ಮ ಪಾಲಿಗೆ ಇದೊಂದು ಗೌರವ. ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ನಾನು ಮೈದಾನದಲ್ಲಿ ಕೊಂಚ ಭಾವುಕನಾಗಿದ್ದೆ. ಆದರೆ ಧೋನಿ ನನ್ನನ್ನು ಸಮಾಧಾನಪಡಿಸಿದ್ದರು. ಆ ಸಂದರ್ಭದಲ್ಲಿ ನಾನು ನಿಜಕ್ಕೂ ಭಾವೋದ್ವೇಗಕ್ಕೆ ಒಳಗಾಗಿದ್ದೆ ಎಂದು ಕೊಹ್ಲಿ ತಮ್ಮ ಮನದಾಳದ ಮಾತನ್ನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.