ಕ್ರಿಕೆಟ್

ಫಿಕ್ಸಿಂಗ್‌ಗಾಗಿ ಗಂಗೂಲಿಯನ್ನು ಸಂಪರ್ಕಿಸುವ ಸಾಹಸಕ್ಕೆ ಕೈಹಾಕಿಲ್ಲ: ಮಾಜಿ ಬುಕ್ಕಿ

ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಸಾಕಷ್ಟು ಕೇಳಿ ಬಂದಿವೆ. ಪ್ರತಿಯೊಂದು ತಂಡದ ವಿರುದ್ಧ ಒಂದಲ್ಲ ಒಂದು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು...

ಫಿಕ್ಸಿಂಗ್‌ಗಾಗಿ ಗಂಗೂಲಿಯನ್ನು ಸಂಪರ್ಕಿಸುವ ಸಾಹಸಕ್ಕೆ ಕೈಹಾಕಿಲ್ಲ: ಮಾಜಿ ಬುಕ್ಕಿ
Sourav Ganguly
Published On :

ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಸಾಕಷ್ಟು ಕೇಳಿ ಬಂದಿವೆ. ಪ್ರತಿಯೊಂದು ತಂಡದ ವಿರುದ್ಧ ಒಂದಲ್ಲ ಒಂದು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ದಾಖಲಾಗಿದ್ದು ಅವುಗಳ ಘನತೆಗೆ ಕುಂದು ತಂದಿವೆ.

ಅಂತೆ ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಮಾತ್ರ ತಮ್ಮ ಕ್ರಿಕೆಟ್ ಬದುಕಿನಲ್ಲಿ ಯಾವುದೇ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ವರದಿಯಾಗಿಲ್ಲ. ಇದಕ್ಕೆ ಕಾರಣ ಅವರ ಪ್ರಮಾಣಿಕತೆ. ಗಂಗೂಲಿಯನ್ನು ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗುವಂತೆ ಮಾಡಲು ಕೆಲ ಬುಕ್ಕಿಗಳು ಯತ್ನಿಸಿದ್ದರು. ಆದರೆ ಗಂಗೂಲಿಯನ್ನು ಭೇಟಿಯಾಗಲು ಭಯಪಡುತ್ತಿದ್ದೇವು ಎಂದು ಮಾಜಿ ಬುಕ್ಕಿಯೊಬ್ಬರು ವಿಷಯ ಬಹಿರಂಗಪಡಿಸಿದ್ದಾರೆ.

ಗಂಗೂಲಿ ಟೀಂ ಇಂಡಿಯಾದ ನಾಯಕನಾಗಿದ್ದಾಗ ಕೆಲ ಬುಕ್ಕಿಗಳು ಅವರನ್ನು ಭೇಟಿಯಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿಸಲು ಯೋಜನೆ ಮಾಡಿದ್ದರಂತೆ. ಆದರೆ ಗಂಗೂಲಿ ಮಾತ್ರ ಸದಾ ಶಂಕಿತ ವ್ಯಕ್ತಿಗಳಿಂದ ದೂರ ಇರುತ್ತಿದ್ದರು ಎಂದು ಬುಕ್ಕಿ ಹೇಳಿದ್ದಾನೆ.

ಯಾರೇ ಆಗಲಿ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಅಂತ ತಿಳಿದ ಕೂಡಲೇ ಗಂಗೂಲಿ ಅಂತವರಿಂದ ದೂರವಿರುತ್ತಿದ್ದರು. ಹೀಗಾಗಿ ಗಂಗೂಲಿ ಕ್ರಿಕೆಟ್ ಜೀವನ ಮುಗಿಯುವವರೆಗೆ ಯಾವ ಬುಕ್ಕಿಯೂ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿಲ್ಲ. ಅಥವಾ ಪ್ರಯತ್ನಿಸುವ ಸಾಹಸಕ್ಕೆ ಕೈ ಹಾಕಿಲ್ಲ ಎಂದು ಬುಕ್ಕಿ ಹೇಳಿದ್ದಾರೆ.

ಮೋಸದಾಟದಲ್ಲಿ ಭಾಗಿಯಾದ ಆರೋಪದ ಮೇಲೆ ಮೊಹಮ್ಮದ್ ಅಜರುದ್ದೀನ್ ಮತ್ತು ಅಜಯ್ ಜಡೇಜಾ ಅವರು ನಿಷೇಧಕ್ಕೆ ಒಳಗಾಗಿ ತಮ್ಮ ಕ್ರಿಕೆಟ್ ಬದುಕನ್ನು ಅಂತ್ಯಗೊಳಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.