ಸಿನಿಮಾ ಸುದ್ದಿ

ಕುಡಿತ ಬಿಟ್ಟೆ, ಲವ್, ಹಾರ್ಟ್ ಬ್ರೇಕ್; ಕೊನೆಗೆ ರಶ್ಮಿಕಾ ಜೊತೆ ಮದುವೆ: ಸೀಕ್ರೆಟ್‌ ರಿವೀಲ್ ಮಾಡಿದ ವಿಜಯ ದೇವರಕೊಂಡ!

ವಿಜಯ್ ದೇವರಕೊಂಡ ಅವರು ಇತ್ತೀಚಿಗೆ ತೆಲುಗು ಚಿತ್ರ 'ರೋಮಂಚಕಂ' ನ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಜೀವನದ ಕೆಲವು ರೋಮಾಂಚಕ ಕ್ಷಣಗಳ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಕುಡಿತ ಬಿಟ್ಟೆ, ಲವ್, ಹಾರ್ಟ್ ಬ್ರೇಕ್; ಕೊನೆಗೆ ರಶ್ಮಿಕಾ ಜೊತೆ ಮದುವೆ: ಸೀಕ್ರೆಟ್‌ ರಿವೀಲ್ ಮಾಡಿದ ವಿಜಯ ದೇವರಕೊಂಡ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
Published On :

ಈ ವರ್ಷದ ಆರಂಭದಲ್ಲಿ ಕನ್ನಡತಿ ಹಾಗೂ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಟಾಲಿವುಡ್‌ನ ಜನಪ್ರಿಯ ನಟ ವಿಜಯ್ ದೇವರಕೊಂಡ ಅವರು ತಮ್ಮ ಜೀವನದ ಕೆಲವು ರೋಮಾಂಚಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಅವರು ಇತ್ತೀಚಿಗೆ ತೆಲುಗು ಚಿತ್ರ 'ರೋಮಂಚಕಂ' ನ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಜೀವನದ ಕೆಲವು ರೋಮಾಂಚಕ ಕ್ಷಣಗಳ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಪ್ರಣಯ್ ರೆಡ್ಡಿ ವಂಗಾ ಅವರ ನಿರ್ಮಾಣದ ರೋಮಂಚಕಂ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ವಿಜಯ್​ ದೇವರಕೊಂಡ ಅವರು, ತಮ್ಮ ಜೀವನದಲ್ಲಿ ಇದುವರೆಗೆ ನಡೆದ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಕುಡಿತವನ್ನು ತ್ಯಜಿಸುವುದು, ಹಾರ್ಟ್ ಬ್ರೇಕ್ ಆಗವುದು ಮತ್ತು ಪ್ರೀತಿಯಲ್ಲಿ ಬೀಳುವುದು. ಕೊನೆಗೆ ಮದುವೆ ವಿಚಾರವನ್ನು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ, ನಿರೂಪಕರು 2026ರಲ್ಲಿ ನಿಮಗೆ ಅತ್ಯಂತ 'ರೋಮಂಚಕಂ'(ರೋಮಾಂಚಕಾರಿ) ಕ್ಷಣ ಯಾವುದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸುವಾಗ ರಶ್ಮಿಕಾ ಮಂದಣ್ಣ ಅವರೊಂದಿಗೆ ವಿಜಯ್ ಅವರ ಮದುವೆಯ ವರ್ಷ ಮತ್ತು ಅವರ ಬಗ್ಗೆ ಮಾತನಾಡುವ ಬದಲು, ಅವರು ತಮ್ಮ ಇಡೀ ಜೀವನದ ಬಗ್ಗೆ ಮಾತನಾಡಿದ್ದಾರೆ.

ನಾನು 1989 ರಲ್ಲಿ ಜನಿಸಿದೆ. ಇದು ಪ್ರತಿ ಬಾರಿಯೂ ರೋಮಾಂಚಕ. ನನ್ನ ಜೇಬಿನಲ್ಲಿ ಹಣವಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನಾನು ಬ್ಲೆಂಡರ್ಸ್ ಪ್ರೈಡ್ ಮತ್ತು ಗ್ಲೆನ್‌ಫಿಡ್ಡಿಚ್ ಕುಡಿಯುತ್ತಿದ್ದೆ. ಆದರೆ ನಂತರ ನಾನು ಕುಡಿಯುವುದನ್ನು ಬಿಟ್ಟುಬಿಟ್ಟೆ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಆದರೆ ಕುಡಿಯುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದಕ್ಕೆ ಯಾವುದೇ ಕಾರಣ ನೀಡಿಲ್ಲ.

ನಂತರ ನಾನು ಪ್ರೀತಿಸುತ್ತಿದ್ದೆ. ಎದೆಗುಂದಿದೆ. ಮದುವೆಯಾದೆ ಎಲ್ಲವೂ ರೋಮಾಂಚಕವಾಗಿತ್ತು ಎಂದು ವಿಜಯ ದೇವರಕೊಂಡ ತಿಳಿಸಿದ್ದಾರೆ.

ವಿಜಯ್ ಈ ಮಾತು ಸಹಜವಾಗಿಯೇ ಅಭಿಮಾನಿಗಳ ಗಮನ ಸೆಳೆದಿದೆ. ನಟನ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಕಾರ್ಯಕ್ರಮದಲ್ಲಿ ನಟ ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿರುವುದು ಮತ್ತಷ್ಟು ವೈರಲ್ ಆಗಿದೆ.

ಗೀತ ಗೋವಿಂದಂ ಸಿನಿಮಾದಿಂದ ಒಂದಾದ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್​​ ಮಾಡುತ್ತಿದ್ದ ಬಗ್ಗೆ ಸುದ್ದಿ ಹರಿದಾಡುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಫೆಬ್ರವರಿ 23 ಮತ್ತು 24 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.