ಸಿಎಂ ವಿಜಯ್ ರಾಜಕೀಯ ವಿರೋಧಿ ಸ್ಟಾಲಿನ್ ನಿಂದ ತ್ರಿಶಾಗೆ 12 ಕೋಟಿ ರೂ ಸಿನೆಮಾ ಆಫರ್?
ಈ ಬೆಳವಣಿಗೆ ತಮಿಳು ಚಿತ್ರರಂಗ ಮತ್ತು ರಾಜಕೀಯ ವಲಯ ಎರಡರಲ್ಲೂ ಗಮನ ಸೆಳೆದಿದೆ. ವಿಶೇಷವಾಗಿ ದಳಪತಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಇರುವ ರಾಜಕೀಯ ಪೈಪೋಟಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಹೆಚ್ಚು ಚರ್ಚೆ ನಡೆಯುತ್ತಿದೆ.

ನಟಿ ತ್ರಿಶಾ ಕೃಷ್ಣನ್ ಮತ್ತೆ ತೀವ್ರ ಚರ್ಚೆಯ ಕೇಂದ್ರಬಿಂದು ಆಗಿದ್ದಾರೆ. ರಾಜಕಾರಣಿ ಹಾಗೂ ಚಿತ್ರನಿರ್ಮಾಪಕರಾದ ಉದಯನಿಧಿ ಸ್ಟಾಲಿನ್ ಅವರು ಬಂಡವಾಳ ಹಾಕುತ್ತಿರುವ ಒಂದು ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲು ತ್ರಿಶಾ ಕೃಷ್ಣನ್ ಗೆ 12 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂದು ವದಂತಿ ತಮಿಳು ನಾಡಿನಲ್ಲಿ ಹಬ್ಬಿದೆ.
ಈ ಬೆಳವಣಿಗೆ ತಮಿಳು ಚಿತ್ರರಂಗ ಮತ್ತು ರಾಜಕೀಯ ವಲಯ ಎರಡರಲ್ಲೂ ಗಮನ ಸೆಳೆದಿದೆ. ವಿಶೇಷವಾಗಿ ದಳಪತಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಇರುವ ರಾಜಕೀಯ ಪೈಪೋಟಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಹೆಚ್ಚು ಚರ್ಚೆ ನಡೆಯುತ್ತಿದೆ.
ತ್ರಿಶಾ ಪ್ರಸ್ತುತ ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದು, ಪ್ರತಿ ಚಿತ್ರಕ್ಕೆ 10 ರಿಂದ 12 ಕೋಟಿವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ನಿರ್ದಿಷ್ಟ ಚಿತ್ರದ ಬಗ್ಗೆ ನಟಿ ಅಥವಾ ನಿರ್ಮಾಪಕರಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
ಅವರು ಈಗ ನಟ ಸೂರ್ಯ ಅವರೊಂದಿಗೆ ನಟಿಸಿರುವ “ಕರುಪ್ಪು” ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮುಂದುವರಿದಿದ್ದು, ಅಧಿಕೃತ ಪ್ರಕಟಣೆ ಹೊರಬರುವವರೆಗೆ ಇದು ಕೇವಲ ಊಹಾಪೋಹವಾಗಿಯೇ ಉಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



