ಸಿನಿಮಾ ಸುದ್ದಿ

ವರುಣ್ ಧವನ್ ಮಗಳಿಗೆ DDH ಕಾಯಿಲೆ: ಮಗುವಿನ ಸ್ಥಿತಿ ಬಗ್ಗೆ ವಿವರ; ಯಾರ ಸಹಾನುಭೂತಿಯೂ ಬೇಡ ಎಂದ ನಟ!

ಈ ಕಾಯಿಲೆಯಿಂದ ಬೇಗನೆ ಆರ್ಥ್ರೈಟಿಸ್ ಮತ್ತು ಸ್ಲಿಪ್ ಡಿಸ್ಕ್ ಬರುವ ಸಾಧ್ಯತೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿನಿಂದಲೇ ಇದಕ್ಕೆ ಉತ್ತಮ ಚಿಕಿತ್ಸೆ ಸಿಗುತ್ತದೆ.

ವರುಣ್ ಧವನ್ ಮಗಳಿಗೆ DDH ಕಾಯಿಲೆ: ಮಗುವಿನ ಸ್ಥಿತಿ ಬಗ್ಗೆ ವಿವರ; ಯಾರ ಸಹಾನುಭೂತಿಯೂ ಬೇಡ ಎಂದ ನಟ!
ವರುಣ್ ಧವನ್ ಪುತ್ರಿ
Published On :

ಮುಂಬಯಿ: ನಟ ವರುಣ್ ಧವನ್ ತಮ್ಮ ಮಗಳು ಲಾರಾ ಆರೋಗ್ಯದ ಬಗ್ಗೆ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗೆ DDH ಎಂಬ ಕಾಯಿಲೆ ಇದ್ದು, ಇದರಿಂದಾಗಿ ಅವಳಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆದರೆ ಈಗ ಚಿಕಿತ್ಸೆ ಬಳಿಕ ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರುಣ್ ಹೇಳಿದ್ದಾರೆ.

'ಬೀ ಅ ಮ್ಯಾನ್' ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ವರುಣ್ ಧವನ್ ಈ ವಿಷಯ ತಿಳಿಸಿದ್ದಾರೆ. ನನ್ನ ಮಗಳಿಗೆ DDH (ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್) ಇತ್ತು. ಇದರಲ್ಲಿ ಸೊಂಟದ ಮೂಳೆ ಜಾರಿಕೊಳ್ಳುತ್ತದೆ. ಒಂದು ಕಾಲು ಉದ್ದ, ಇನ್ನೊಂದು ಗಿಡ್ಡ ಆಗಿ ನಡಿಗೆಯಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ಸರಿಯಾಗಿ ನಡೆಯಲು ಅಥವಾ ಓಡಲು ಸಾಧ್ಯವಾಗುವುದಿಲ್ಲ” ಎಂದು ವಿವರಿಸಿದ್ದಾರೆ.

ಈ ಕಾಯಿಲೆಯಿಂದ ಬೇಗನೆ ಆರ್ಥ್ರೈಟಿಸ್ ಮತ್ತು ಸ್ಲಿಪ್ ಡಿಸ್ಕ್ ಬರುವ ಸಾಧ್ಯತೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿನಿಂದಲೇ ಇದಕ್ಕೆ ಉತ್ತಮ ಚಿಕಿತ್ಸೆ ಸಿಗುತ್ತದೆ. ಭಾರತದಲ್ಲಿ ಎಲ್ಲ ಕಡೆ ಅಷ್ಟು ಸೌಲಭ್ಯ ಇಲ್ಲದಿರಬಹುದು, ಆದರೆ ಇಲ್ಲಿಯೂ ಉತ್ತಮ ವೈದ್ಯರಿದ್ದು, ಇದಕ್ಕೆ ಚಿಕಿತ್ಸೆ ನೀಡುತ್ತಾರೆ ಎಂದರು.

ಅವಳಿಗೆ ಸರ್ಜರಿ ಬೇಕಾಗಲಿಲ್ಲ. ಒಂದು ಪ್ರೊಸೀಜರ್ ಮೂಲಕ ಸೊಂಟದ ಮೂಳೆಯನ್ನು ಸರಿಯಾದ ಜಾಗಕ್ಕೆ ಕೂರಿಸಲಾಯಿತು. ಆದರೆ ಅವಳು 2.5 ತಿಂಗಳು ಸ್ಪೈಕಾ ಕಾಸ್ಟ್‌ನಲ್ಲಿ ಇರಬೇಕಾಯಿತು. ಅರಿವಳಿಕೆ ನೀಡಿ ಕಾಸ್ಟ್ ಹಾಕುವುದು ತುಂಬಾ ಕಷ್ಟಕರವಾಗಿತ್ತು. ಈಗ ಕಾಸ್ಟ್ ತೆಗೆಯಲಾಗಿದೆ ಎಂದು ಹೇಳಿದರು.

ಎಲ್ಲಾ ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ಗಮನ ಹರಿಸಬೇಕು. ಆರಂಭಿಕ ವರ್ಷಗಳಲ್ಲಿ ಏನಾದರೂ ಅಸಹಜತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾಕೆಂದರೆ ಈ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿದರೆ ಗುಣಪಡಿಸಬಹುದು ಎಂದು ವರುಣ್ ಧವನ್ ಸಲಹೆ ನೀಡಿದ್ದಾರೆ.

ವರುಣ್ ಧವನ್ ಸ್ಪಷ್ಟವಾಗಿ ಹೇಳಿದ್ದಾರೆ, “ನನಗೆ ಯಾರ ಸಹಾನುಭೂತಿಯೂ ಬೇಡ. ಭಾರತದಲ್ಲಿ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದಕ್ಕಾಗಿಯೇ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಈ ಬಗ್ಗೆ ಜಾಗೃತಿ ಮೂಡಿಸುವುದೇ ನನ್ನ ಉದ್ದೇಶ ಎಂಜು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.