ರಾಜ್ಯಸಭೆಗೆ ಸ್ಮೃತಿ ಇರಾನಿ, ವರುಣ್ ಗಾಂಧಿ ರೀ ಎಂಟ್ರಿ? ಉತ್ತರ ಪ್ರದೇಶದಿಂದ ಆಯ್ಕೆ ಸಾಧ್ಯತೆ!
ಮಾಜಿ ಸಂಸದ ವರುಣ್ ಗಾಂಧಿ ಅವರ ಹೆಸರೂ ರಾಜ್ಯಸಭಾ ಸ್ಥಾನಕ್ಕೆ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಂಜೀವ್ ಬಲ್ಯಾನ್ ಹಾಗೂ ಸತ್ಯಪಾಲ್ ಸಿಂಗ್ ಅವರ ಹೆಸರುಗಳೂ ಪರಿಶೀಲನೆಯಲ್ಲಿವೆ ಎಂದು ವರದಿಯಾಗಿದೆ.

ಲಕ್ನೋ: ಉತ್ತರಪ್ರದೇಶದಿಂದ 10 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಅ.16ರಂದು ಚುನಾವಣೆ ನಡೆಯಲಿದ್ದು, ಎಂಟು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿಯಿಂದ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ, ಬಿಜೆಪಿಯ ಕರ್ನಾಟಕ ರಾಜ್ಯ ಉಸ್ತುವಾರಿಯೂ ಆಗಿರುವ ಹರೀಶ್ ದ್ವಿವೇದಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ.
ಇನ್ನು ಮಾಜಿ ಸಂಸದ ವರುಣ್ ಗಾಂಧಿ ಅವರ ಹೆಸರೂ ರಾಜ್ಯಸಭಾ ಸ್ಥಾನಕ್ಕೆ ಚರ್ಚೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಂಜೀವ್ ಬಲ್ಯಾನ್ ಹಾಗೂ ಸತ್ಯಪಾಲ್ ಸಿಂಗ್ ಅವರ ಹೆಸರುಗಳೂ ಪರಿಶೀಲನೆಯಲ್ಲಿವೆ ಎಂದು ವರದಿಯಾಗಿದೆ.
ಸ್ಮೃತಿ ಇರಾನಿ ಮತ್ತು ದ್ವಿವೇದಿ ಅವರನ್ನು ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿತ್ತು. ಈ ಹಿಂದೆ ಅಮೇಠಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನಾಯಕಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಸ್ಮೃತಿ ಇರಾನಿಗೆ ರಾಜ್ಯಸಭೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಅದೇ ರೀತಿ ಸಂಘಟಕ ಮಾಜಿ ಸಂಸದ ಹರೀಶ್ ದ್ವಿವೇದಿ ಅವರ ಹೆಸರೂ ಟಿಕೆಟ್‌ಗಾಗಿ ಮುನ್ನಲೆಯಲ್ಲಿದೆ ಎಂದು
ಅದೇ ರೀತಿ 2024ರಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟ ಬಳಿಕ ಬಹುತೇಕ ಮೂಲೆಗುಂಪಾಗಿದ್ದ ವರುಣ್ ಗಾಂಧಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವ ಮೂಲಕ ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡುವ ಕುರಿತೂ ಚರ್ಚೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ 10ನೇ ಸ್ಥಾನಕ್ಕಾಗಿ ಸಮಾಜವಾದಿ ಪಾರ್ಟಿ (ಎಸ್‌ಪಿ) ಹಾಗೂ ಆಡಳಿತಾರೂಢ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
ಪ್ರಸ್ತುತ ಸಂಖ್ಯಾಬಲದ ಪ್ರಕಾರ ಸಮಾಜವಾದಿ ಪಾರ್ಟಿಯು ಕೇವಲ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದ್ದರೂ, 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸಲು ಪಕ್ಷ ನಿರ್ಧರಿಸಿದೆ. ಅವರೊಂದಿಗೆ ಮಾಜಿ ಐಎಎಸ್ ಅಧಿಕಾರಿ ಅಲೋಕ್ ರಂಜನ್ ಹಾಗೂ ಸಲೀಂ ಇಕ್ಬಾಲ್ ಹೆಸರುಗಳು ಮುಂಚೂಣಿಯಲ್ಲಿದ್ದು, ಪಕ್ಷವು ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಬಿಜೆಪಿಯು 7 ಸ್ಥಾನಗಳನ್ನು ಅಧಿಕೃತವಾಗಿ ಸುಲಭವಾಗಿ ಗೆಲ್ಲುವುದು ಖಚಿತವಾಗಿದೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 8ನೇ ಅಭ್ಯರ್ಥಿಯನ್ನೂ ಕಣಕ್ಕಿಳಿಸಿ, ಕ್ರಾಸ್ ವೋಟಿಂಗ್ (ಪಕ್ಷಾಂತರ ಮತದಾನ) ಮೂಲಕ ಗೆಲುವು ಸಾಧಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಇದೇ ಕಾರಣಕ್ಕಾಗಿ ಬಿಜೆಪಿಯು ಈ ಬಾರಿ ಜಾಟ್, ರಜಪೂತ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಯೋಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


