K Bhagyaraj Dies: ಸಾವಿನ ಮನೆಯಲ್ಲೂ TRP ಗಾಗಿ ಮುಗಿಬಿದ್ದ ಮಾಧ್ಯಮಗಳು,ರಾಧಿಕಾ ಶರತ್ ಕುಮಾರ್ ಗರಂ!
ಕಣ್ಣೀರಿಡುತ್ತಾ ದಯವಿಟ್ಟು, ಹಿಂದೆ ಹೋಗಿ, ದು:ಖದಲ್ಲಿರುವ ಅವರ ಕುಟುಂಬಕ್ಕೆ ಖಾಸಗಿ ಕ್ಷಣಗಳಿಗೆ ಅಡ್ಡಿ ಮಾಡಬೇಡಿ ಎಂದು ಎರಡು ಕೈ ಮುಗಿದು ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಟ ಕೆ. ಭಾಗ್ಯರಾಜ್ ಅವರ ನಿಧನದಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ನಿವಾಸದ ಹೊರಗೆ ಮೌನ, ದುಃಖ ಮಾಡುಗಟ್ಟಿತ್ತು. ಅಂತಿಮ ನಮನ ಸಲ್ಲಿಸಲು ಕುಟುಂಬಸ್ಥರು, ಸಹೋದ್ಯೋಗಿಗಳು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಇಂತಹ ದು:ಖದ ಸನ್ನಿವೇಶದಲ್ಲಿ TRP ಗಾಗಿ ಮುಗಿಬಿದ್ದ ಮಾಧ್ಯಮಗಳ ವಿರುದ್ಧ ನಟಿ ರಾಧಿಕಾ ಶರತ್ಕುಮಾರ್ ಗರಂ ಆಗಿದ್ದಾರೆ.
ಕಣ್ಣೀರಿಡುತ್ತಾ ದಯವಿಟ್ಟು, ಹಿಂದೆ ಹೋಗಿ, ದು:ಖದಲ್ಲಿರುವ ಅವರ ಕುಟುಂಬಕ್ಕೆ ಖಾಸಗಿ ಕ್ಷಣಗಳಿಗೆ ಅಡ್ಡಿ ಮಾಡಬೇಡಿ ಎಂದು ಎರಡು ಕೈ ಮುಗಿದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಹೌದು. ಭಾಗ್ಯರಾಜ್ ಅವರ ಮೃತದೇಹ ಹೊತ್ತ ಆಂಬ್ಯುಲೆನ್ಸ್ ನಿವಾಸದತ್ತ ಬರುತ್ತಿದ್ದಂತೆ, ನೇರ ದೃಶ್ಯಗಳನ್ನು ಸೆರೆಹಿಡಿಯಲು ಮಾಧ್ಯಮ ಸಿಬ್ಬಂದಿ ಸುತ್ತುವರೆದಿದ್ದಾರೆ. ಇದು ದುಃಖಿತ ಕುಟುಂಬಕ್ಕೆ ಇನ್ನಷ್ಟು ದುಃಖವನ್ನುಂಟುಮಾಡಿತು.
ಇದನ್ನು ನೋಡಿ ಗರಂ ಆದ ರಾಧಿಕಾ ಶರತ್ಕುಮಾರ್, ಕೈ ಮುಗಿದು ಕೇಳಿಕೊಳ್ಳುತ್ತೇನೆ. ಟಿಆರ್ ಪಿಗಾಗಿ ಬೆನ್ನಟ್ಟಬೇಡಿ. ನಮ್ಮ ಸಿನಿಮಾಗಳ ಮೂಲಕ ನಿಮ್ಮನ್ನು ನಾವು ರಂಜಿಸುತ್ತೇವೆ. ದಯವಿಟ್ಟು ಕುಟುಂಬಕ್ಕೆ. ಕುಟುಂಬದ ಖಾಸಗಿ ಕ್ಷಣಗಳಿಗೆ ಅಡ್ಡಿಪಡಿಸಬೇಡಿ. ಹಿಂದೆ ಸರಿದು ಪರಿಸ್ಥಿತಿಯನ್ನು ಗೌರವಿಸುವಂತೆ ಪದೇ ಪದೇ ಕೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



