ಇತಿಹಾಸ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್!
ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ.

ಬೆಂಗಳೂರು: ಸಾಲು ಸಾಲು ಹಿನ್ನಡೆಗಳ ನಡುವೆ 19 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧುಗೆ ಕಿಚ್ಚ ಸುದೀಪ್ ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.
ಇತ್ತೀಚೆಗೆ ನಡೆದ ಜಪಾನ್ ಓಪನ್ ಬಿಡಬ್ಲ್ಯುಎಫ್ ಸೂಪರ್ ಸಿರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ ಭಾರತದ ಮೊದಲ ಷಟ್ಲರ್ ಎನಿಸಿಕೊಂಡ ಪಿವಿ ಸಿಂಧು ಅವರಿಗೆ ಉಡುಗೊರೆ ನೀಡಿದ ವಿಚಾರವನ್ನು ಸ್ವತಃ ಸುದೀಪ್ ಬಹಿರಂಗಪಡಿಸಿದ್ದಾರೆ. ಉಡುಗೊರೆಯೊಂದಿಗೆ ತಮ್ಮ ಹೆಸರು ಇರುವ ಲೆಟರ್‌ಹೆಡ್‌ನಲ್ಲಿ ಅಭಿನಂದನಾ ಪತ್ರವನ್ನೂ ಕೂಡ ಸುದೀಪ್ ಕಳುಹಿಸಿಕೊಟ್ಟಿದ್ದಾರೆ.
ಜಪಾನ್ ಟೂರ್ನಿ ಗೆದ್ದ ಪಿವಿ ಸಿಂಧು ಅವರಿಗೆ ವಿಶೇಷ ಉಡುಗೊರೆಯನ್ನು ಸುದೀಪ್ ಕಳಿಸಿದ್ದಾರೆ. ವಿಶೇಷವಾದ ಅಭಿನಂದನಾ ಪತ್ರವನ್ನು ಸುದೀಪ್, ಸಿಂಧು ಅವರಿಗೆ ಕಳಿಸಿದ್ದು, ‘ಜಪಾನ್ ಓಪನ್‌ನಲ್ಲಿ ದಾಖಲೆ ಮುರಿಯುವಂತಹ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು.
ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ.

ಇದರ ಜೊತೆಗೆ ವಿಶೇಷ ಗಿಫ್ಟ್ ಹ್ಯಾಂಪರ್ ಅನ್ನು ಸಹ ಸುದೀಪ್ ಅವರು ಪಿವಿ ಸಿಂಧುಗೆ ಕಳಿಸಿಕೊಟ್ಟಿದ್ದಾರೆ. ಸುದೀಪ್ ಅವರು ಕಳಿಸಿರುವ ಪತ್ರ ಮತ್ತು ಗಿಫ್ಟ್ ಹ್ಯಾಂಪರ್ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಿವಿ ಸಿಂಧು, ‘ಬಹಳ ಧನ್ಯವಾದಗಳು ಸುದೀಪ್ ಸರ್’ ಎಂದು ಬರೆದುಕೊಂಡಿದ್ದಾರೆ.
31 ವರ್ಷದ ಪಿವಿ ಸಿಂಧು ಫೈನಲ್ ಪಂದ್ಯದ 50 ನಿಮಿಷದ ಕಾದಾಟದಲ್ಲಿ 21-17, 21-17 ನೇರ ಗೇಮ್‌ಗಳಿಂದ ಯಮಗುಚಿ ಅವರನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೋಲಿಸಿದ್ದರು. ಕಿಚ್ಚ ಸುದೀಪ್ ಅವರು ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಾಗದೆ ಕ್ರೀಡಾರಂಗದಲ್ಲೂ ಸದಾ ಸಕ್ರಿಯರಾಗಿರುತ್ತಾರೆ. ಕ್ರೀಡಾಪಟುಗಳನ್ನ ಪ್ರೋತ್ಸಾಹಿಸುವಲ್ಲಿ ಮತ್ತು ಅವರ ಸಾಧನೆಗಳನ್ನ ಮುಕ್ತಕಂಠದಿಂದ ಶ್ಲಾಘಿಸುವಲ್ಲಿ ಸುದೀಪ್ ಎಂದಿಗೂ ಮುಂಚೂಣಿಯಲ್ಲಿರುತ್ತಾರೆ.

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


