'ಜನ ನಾಯಗನ್' ಚಿತ್ರದ ತಮ್ಮ ದೃಶ್ಯಕ್ಕೆ ಕತ್ತರಿ; ಕಣ್ಣೀರಾಕಿ ಸಂಕಷ್ಟ ತೋಡಿಕೊಂಡ ತಮಿಳು ನಟಿ ಆನಂದಿ ಅಜಯ್
ಎಚ್ ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರವು ನಟನಾಗಿ ವಿಜಯ್ ಅವರ ಕೊನೆಯ ಚಿತ್ರವೆಂದು ವರದಿಯಾಗಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಅವರಂತಹ ಪ್ರಮುಖ ತಾರೆಯರ ದಂಡೇ ಇದೆ.

ತಮಿಳು ನಟಿ ಆನಂದಿ ಅಜಯ್ ಅವರು, ವಿಜಯ್ ಅವರ 'ಜನ ನಾಯಗನ್' ಚಿತ್ರದಿಂದ ತಮ್ಮ ದೃಶ್ಯವನ್ನು ಕೈಬಿಟ್ಟ ನಂತರ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದು, ಅಲುತ್ತಾ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಕಣ್ಣಲ್ಲಿ ನೀರು ತುಂಬಿಕೊಂಡು, ಈ ಚಿತ್ರಕ್ಕಾಗಿ ತಾವು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾಗಿ ಅವರು ತಮಿಳು ಭಾಷೆಯಲ್ಲಿ ಹೇಳಿದ್ದಾರೆ. ವಿಜಯ್ ಅವರೊಂದಿಗೆ ಕೆಲಸ ಮಾಡಲು ಅವರು ಉತ್ಸುಕಳಾಗಿದ್ದೆ, ಆದರೆ ತಮ್ಮ ದೃಶ್ಯಗಳನ್ನು ತೆಗೆದುಹಾಕಿದ್ದರಿಂದ ಬೇಸರಗೊಂಡಿರುವುದಾಗಿ ತಿಳಿಸಿದ್ದಾರೆ.
ವಿಜಯ್ ಅವರ ಕೊನೆಯ ಚಿತ್ರವೆಂದು ಹೇಳಲಾಗಿರುವ ಕಾರಣ, ಅವರೊಂದಿಗೆ ಕೆಲಸ ಮಾಡಲು ತಮಗೆ ಎರಡನೇ ಅವಕಾಶ ಸಿಗುವುದಿಲ್ಲ ಎಂಬ ಬಗ್ಗೆಯೂ ಆಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
'ನಿಮ್ಮ ಭಾವನೆಗಳನ್ನು ನನಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ದಯವಿಟ್ಟು ಧೈರ್ಯವಾಗಿರಿ — ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ನೀವು ಅತ್ಯಂತ ಪ್ರತಿಭಾವಂತರು ಮತ್ತು ಅದ್ಭುತ ವ್ಯಕ್ತಿತ್ವದವರು. ಎಲ್ಲವೂ ಒಂದು ಕಾರಣಕ್ಕಾಗಿಯೇ ನಡೆಯುತ್ತದೆ; ನಿಮಗಾಗಿ ಏನೋ ದೊಡ್ಡದು ಕಾದಿದೆ. ಧೈರ್ಯವಾಗಿರಿ ಮತ್ತು ಎದೆಗುಂದಬೇಡಿ' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು, 'ನಿಮಗೆ ಶೀಘ್ರದಲ್ಲೇ ಒಂದು ಉತ್ತಮ ಪ್ರಮುಖ ಪಾತ್ರ ಸಿಗಲಿದೆ. ಎಲ್ಲವೂ ಒಂದು ಕಾರಣಕ್ಕಾಗಿಯೇ ನಡೆಯುತ್ತದೆ — ಸಕಾರಾತ್ಮಕವಾಗಿರಿ' ಎಂದಿದ್ದಾರೆ.
'ಚಿಂತಿಸಬೇಡಿ; ನೀವು ಇನ್ನೂ ಹೆಚ್ಚಿನದಕ್ಕೆ ಅರ್ಹರು. ಧೈರ್ಯವಾಗಿರಿ' ಎಂದು ಮತ್ತೊಬ್ಬರು ಬರೆದಿದ್ದಾರೆ.
ಆನಂದಿ ಅಜಯ್ ಅವರು ಟಿವಿ ಶೋಗಳಾದ ಕಾರ್ತಿಗೈ ಪೆಂಗಲ್, ಯಮುನಾ, ಕನ ಕಾಣುಮ್ ಕಾಲಂಗಲ್ ಮತ್ತು ಕಲ್ಲಿಕೊಟ್ಟು ಪಲ್ಲಿಕೂಡಂನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಯೋಗ ಉತ್ಸಾಹಿ. 'ಡಾನ್ಸ್ ಜೋಡಿ ಡಾನ್ಸ್ 3.0', 'ಜೋಡಿ ನಂ. 1' (ಸೀಸನ್ 6 ಮತ್ತು 7) ಹಾಗೂ 'ಮಾನಡ ಮಯಿಲಡ' (ಸೀಸನ್ 7) ಸೇರಿದಂತೆ ಹಲವಾರು ರಿಯಾಲಿಟಿ ಡಾನ್ಸ್ ಶೋಗಳಲ್ಲಿ ಭಾಗವಹಿಸುವ ಮೂಲಕ ಅವರು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದರು.
ಎಚ್ ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರವು ನಟನಾಗಿ ವಿಜಯ್ ಅವರ ಕೊನೆಯ ಚಿತ್ರವೆಂದು ವರದಿಯಾಗಿದೆ; ಚುನಾವಣೆಗೆ ಮುನ್ನ ಅಭಿಮಾನಿಗಳಿಗೆ ವಿದಾಯ ಹೇಳುವ ಉದ್ದೇಶದಿಂದ ಇದನ್ನು ಮೂಲತಃ ಯೋಜಿಸಲಾಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಅವರಂತಹ ಪ್ರಮುಖ ತಾರೆಯರ ದಂಡೇ ಇದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


