'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!
ಬಿ ವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಜೂನ್ 19 ರಂದು ಜಾಗತಿಕವಾಗಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಸಮಂತಾ ರುತ್ ಪ್ರಭು ಅವರ ಪತಿ ರಾಜ್ ನಿಧಿಮೋರು ಮತ್ತು ಹಿಮಂಕ್ ರೆಡ್ಡಿ ದುವ್ವುರು ಜೊತೆಗೆ ನಿರ್ಮಿಸಿದ್ದಾರೆ.

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ನಟನೆಯ 'ಮಾ ಇಂಟಿ ಬಂಗಾರಂ' (Maa Inti Bangaram)ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರಿಂದ ಸಂತಸಗೊಂಡಿರುವ ನಟಿ ವೀಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಿ ವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಜೂನ್ 19 ರಂದು ಜಾಗತಿಕವಾಗಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಸಮಂತಾ ರುತ್ ಪ್ರಭು ಅವರ ಪತಿ ರಾಜ್ ನಿಧಿಮೋರು ಮತ್ತು ಹಿಮಂಕ್ ರೆಡ್ಡಿ ದುವ್ವುರು ಜೊತೆಗೆ ನಿರ್ಮಿಸಿದ್ದಾರೆ.
ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಚಿತ್ರದ ಫೋಸ್ಟರ್ ವೊಂದನ್ನು ಸಮಂತಾ ರುತ್ ಪ್ರಭು ಹಂಚಿಕೊಂಡಿದ್ದಾರೆ. ಇದರ ಮೇಲೆ 100 ಕೋಟಿ ರೂ.' ಎಂದು ಬರೆಯಲಾಗಿದೆ.
ಮಾ ಇಂಟಿ ಬಂಗಾರಂ' ಬಿಡುಗಡೆಗೂ ಮುನ್ನ ಒಂದು ಜನರು ಚಿತ್ರದ ಬಗ್ಗೆ ಮಾತನಾಡುತ್ತಿದ್ದರಾ? ನಾವು ಜನರನ್ನು ತಲುಪುತ್ತಿದ್ದವೇ? "ಈ ಚಿತ್ರ ಬಗ್ಗೆ ಅವರಿಗೆ ಗೊತ್ತಿತ್ತೇ?"ಎಂದು ಮನಸ್ಸಿನಲ್ಲಿ ಕಾಡುತಿತ್ತು. ಖ್ಯಾತ ನಟ ಇಲ್ಲದಿರುವುದರಿಂದ ಹೆಚ್ಚಿನ ಜನರು ಥಿಯೇಟರ್ ಗೆ ಬರಲ್ಲ ಅಂತ ನಿರ್ಮಾಪಕರು ಹೇಳಿದ್ದರು ಎಂದು ಪ್ರಭು ನೆನಪಿಸಿಕೊಂಡಿದ್ದಾರೆ.
'ಬಿ' (B) ಕೇಂದ್ರವೊಂದರ ಚಿತ್ರಮಂದಿರದ ಮಾಲೀಕರಿಗೆ ನನ್ನ ಸ್ನೇಹಿತರೊಬ್ಬರು ಕರೆ ಮಾಡಿ, ಸಿನಿಮಾ ಆರಂಭದಲ್ಲಿ ಎಷ್ಟರ ಮಟ್ಟಿಗೆ ಗಳಿಕೆ ಕಾಣಬಹುದು ಎಂದು ಕೇಳಿದಾಗ, ಅದಕ್ಕೆ ಆ ಮಾಲೀಕರು ಕಿಂಚಿತ್ತೂ ಹಿಂಜರಿಯದೆ, 'ನಾಯಕಿಯ ಪ್ರಧಾನ ಪಾತ್ರವಿರುವ ಸಿನಿಮಾವನ್ನು ಯಾರಾದರೂ ನೋಡುತ್ತಾರೆಯೇ? ಅದೇ ದೊಡ್ಡ ನಾಯಕನ ಚಿತ್ರವಾಗಿದ್ದರೆ ಪರವಾಗಿಲ್ಲ. ಆಕೆಯ ಗ್ಲಾಮರ್ ಜನರಿಗೆ ಗೊತ್ತು. ಆದರೆ ನಾಯಕಿಯೇ ಪ್ರಧಾನವಾಗಿರುವ ಸಿನಿಮಾ ನೋಡಲು ಯಾರು ಬರ್ತಾರೆ ಎಂದು ಹೇಳಿದ್ದರು. 'ಮಾ ಇಂಟಿ ಬಂಗಾರಂ' ಬಿಡುಗಡೆಯಾಗುವ ಮುನ್ನ ಇದ್ದ ಮನಸ್ಥಿತಿ ಇದಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
ಯಾರೇ ಆಗಲಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಾದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ಪ್ರಯತ್ನಗಳು ಫಲ ನೀಡುವುದಿಲ್ಲ. ಆದರೆ ಅಪರೂಪಕ್ಕೊಮ್ಮೆ ಅವು ಯಶಸ್ವಿಯಾಗುತ್ತವೆ. ನಮ್ಮ ವಿಷಯದಲ್ಲಿ ಅದು ಯಶಸ್ವಿಯಾಯಿತು. ಇದು ಮುಂದೆ ದೊಡ್ಡದಾದ ಪ್ರಯತ್ನಕ್ಕೆ ನಾಂದಿಯಾಗಲಿದೆ ಎಂದು ಭಾವಿಸುತ್ತೇನೆ ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



