ಸಿನಿಮಾ ಸುದ್ದಿ

Challenge Accepted: ಗಿಲ್ಲಿ ಬಿಗ್ ಬಾಸ್ ಗೆದ್ರೆ ಅರ್ಧ ಮೀಸೆ, ಅರ್ಧ ಗಡ್ಡ ಕಚಕ್; ನುಡಿದಂತೆ ನಡೆದ ವ್ಯಕ್ತಿ!

ಅಬ್ದುಲ್‌ ರಜಾಕ್‌ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

Challenge Accepted: ಗಿಲ್ಲಿ ಬಿಗ್ ಬಾಸ್ ಗೆದ್ರೆ ಅರ್ಧ ಮೀಸೆ, ಅರ್ಧ ಗಡ್ಡ ಕಚಕ್; ನುಡಿದಂತೆ ನಡೆದ ವ್ಯಕ್ತಿ!
ಗಿಲ್ಲಿನಟ ಮತ್ತು ಅಬ್ದುಲ್ ರಜಾಕ್
Published On :

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ವಿನ್ನರ್‌ ಆದರೆ ಅರ್ಧ ಗಡ್ಡ ಮತ್ತು ಮೀಸೆ ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದ ವ್ಯಕ್ತಿಯೊಬ್ಬರು ನುಡಿದಂತೆ ನಡೆದುಕೊಂಡಿದ್ದಾರೆ.

ಅಬ್ದುಲ್‌ ರಜಾಕ್‌ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಒಂದುವೇಳೆ ಗಿಲ್ಲಿ ಬಿಗ್‌ ಬಾಸ್‌ನಲ್ಲಿ ವಿನ್ನರ್‌ ಆದ್ರೆ ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದೆ. ಅವರು ಗೆದ್ದಿದ್ದಾರೆ. ಗಿಲ್ಲಿನ ಫ್ಯಾನ್ಸ್‌ ಗೆಲ್ಲಿಸಿದ್ದಾರೆ. ಅದಕ್ಕಾಗಿ ಗಡ್ಡ, ಮೀಸೆ ತೆಗೆಯುತ್ತಿದ್ದೇನೆ ಎಂದು ವೀಡಿಯೋದಲ್ಲಿ ವ್ಯಕ್ತಿ ಹೇಳಿಕೊಂಡಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 12ರ ವಿಜೇತರಾಗಿ ಗಿಲ್ಲಿ ನಟರಾಜ್‌ ಹೊರಹೊಮ್ಮಿದ್ದಾರೆ. ಅಬ್ದುಲ್ ರಜಾಕ್ ವಿಡಿಯೋ ವೈರಲ್ ಆಗಿದೆ. ಅವರು ಯಾವ ಊರಿನವರು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.