ಸಿನಿಮಾ ಸುದ್ದಿ

ಅರ್ಬಾಜ್ ಪಟೇಲ್ ಗೆ ನಿಕ್ಕಿ ತಂಬೋಲಿ ಮೋಸ ಮಾಡಿದ್ರಾ? ಇನ್‌ಸ್ಟಾಗ್ರಾಮ್‌ನಲ್ಲಿ 'ಅನ್‌ಫಾಲೋ'; ಬ್ರೇಕಪ್ ವದಂತಿ!

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿನ ಇಬ್ಬರೂ ಪರಸ್ಪರ ಅನ್‌ಫಾಲೋ' ಮಾಡಿದ್ದಾರೆ. ಜೊತೆಗೆ ಮೋಸ, ಅಕ್ರಮ ಸಂಬಂಧಗಳು ಮತ್ತು ಮುರಿದ ಭರವಸೆಗಳ ಕುರಿತಾದ ಅವರ ಪ್ರತ್ಯೇಕ ಹಾಗೂ ಸೂಚ್ಯವಾದ (cryptic) ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಅರ್ಬಾಜ್ ಪಟೇಲ್ ಗೆ ನಿಕ್ಕಿ ತಂಬೋಲಿ ಮೋಸ ಮಾಡಿದ್ರಾ? ಇನ್‌ಸ್ಟಾಗ್ರಾಮ್‌ನಲ್ಲಿ 'ಅನ್‌ಫಾಲೋ'; ಬ್ರೇಕಪ್ ವದಂತಿ!
ಅರ್ಬಾಜ್ ಪಟೇಲ್, ನಿಕ್ಕಿ ತಂಬೋಲಿ
Published On :

ಬ್ರೇಕಪ್ ಕುರಿತಾದ ವದಂತಿಗಳು ಹೆಚ್ಚುತ್ತಿರುವಂತೆಯೇ ನಿಕ್ಕಿ ತಂಬೋಲಿ ಮತ್ತು ಅರ್ಬಾಜ್ ಪಟೇಲ್ ನಡುವಿನ ಸಂಬಂಧವು ಚರ್ಚೆಗೆ ಗ್ರಾಸವಾಗಿದೆ. 'ಬಿಗ್ ಬಾಸ್ ಮರಾಠಿ 5' ಶೋನಲ್ಲಿ ಭಾಗವಹಿಸಿದ ನಂತರ ನಿಕ್ಕಿ ತಂಬೋಲಿ ಮತ್ತು ಅರ್ಬಾಜ್ ಪಟೇಲ್ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ನಂತರ ಇವರಿಬ್ಬರೂ 'ದಿ 50' (The 50) ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಆದರೆ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿನ ಇಬ್ಬರೂ ಪರಸ್ಪರ ಅನ್‌ಫಾಲೋ' ಮಾಡಿದ್ದಾರೆ. ಜೊತೆಗೆ ಮೋಸ, ಅಕ್ರಮ ಸಂಬಂಧಗಳು ಮತ್ತು ಮುರಿದ ಭರವಸೆಗಳ ಕುರಿತಾದ ಅವರ ಪ್ರತ್ಯೇಕ ಹಾಗೂ ಸೂಚ್ಯವಾದ (cryptic) ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಗೊಂದಲವನ್ನು ಉಂಟುಮಾಡಿವೆ.

ಅರ್ಬಾಜ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಂಬಿಕೆದ್ರೋಹ ಅಥವಾ ಮೋಸದ ವಿಷಯದ ಬಗ್ಗೆ ಪ್ರಸ್ತಾಪಿಸಿದಂತೆ ಕಂಡುಬಂದಿದೆ. "ತಮ್ಮ ಸಂಗಾತಿಗೆ ಮೋಸ ಮಾಡಿ, ನಂತರ ಮನೆಗೆ ಬಂದು ಅವರ ಕಣ್ಣುಗಳಲ್ಲಿ ನೇರವಾಗಿ ನೋಡಿ 'ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಹೇಳುವುದು ಅತ್ಯಂತ ಅವಮಾನಕರವಾದ ಹಾಗೂ ಅಸಹ್ಯಕರವಾದ ವರ್ತನೆ ಎಂದು ಪೋಸ್ಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ.

Story image

ಈ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲವಾದರೂ, ಅದರ ಸಮಯ ಮತ್ತು ಸಂದರ್ಭವು ಇದು ನಿಕ್ಕಿ ಜೊತೆಗಿನ ಸಂಬಂಧಕ್ಕೆ ಸಂಬಂಧಿಸಿದ್ದೇನೋ ಎಂಬ ಊಹಾಪೋಹ ನೆಟ್ಟಿಗರಲ್ಲಿ ಉಂಟಾಗಿದೆ.

ಇದಾದ ಸ್ವಲ್ಪ ಸಮಯದ ನಂತರ, ನಿಕ್ಕಿ ಕೂಡ ಸಂಬಂಧಗಳು, ಸತ್ಯ ಮತ್ತು ಮುರಿದ ಭರವಸೆಗಳ ಕುರಿತಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಹೊಸಬರು ಆಕರ್ಷಕವಾಗಿದ್ದಾರೆ ಎಂಬ ಕಾರಣಕ್ಕೆ ಅಕ್ರಮ ಸಂಬಂಧಗಳು ಉಂಟಾಗುವುದಿಲ್ಲ, ಬದಲಿಗೆ, ಹಳೆಯ ಸಂಗಾತಿಯು ತಾನು ನೀಡಿದ ಭರವಸೆಗಳನ್ನು ಗೌರವಿಸುವುದನ್ನು ನಿಲ್ಲಿಸಿದಾಗ ಇಂತಹ ಸಂಬಂಧಗಳು ಉಂಟಾಗುತ್ತವೆ ಎಂದು ಬರೆದುಕೊಂಡಿದ್ದಾರೆ.

ಅರ್ಬಾಜ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಂತೆಯೇ, ನಿಕ್ಕಿ ಅವರ ಸ್ಟೋರಿಯಲ್ಲೂ ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸಲಾಗಿಲ್ಲ.

Story image

ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರರನ್ನು 'ಅನ್‌ಫಾಲೋ' ಮಾಡುವ ಜೋಡಿಯ ನಿರ್ಧಾರ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸುಮಾರು ಎರಡು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದ ನಿಕ್ಕಿ ಮತ್ತು ಅರ್ಬಾಜ್ ಈಗ ಇದ್ದಕ್ಕಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ 'ಅನ್‌ಫಾಲೋ' ಆಗಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಆದಾಗ್ಯೂ, ಇವರಿಬ್ಬರೂ ತಮ್ಮ ಸಂಬಂಧವನ್ನು ಮುಕ್ತಾಯಗೊಳಿಸಿರುವುದನ್ನು ದೃಢಪಡಿಸಿಲ್ಲ. ಹಾಗೆಯೇ, ಈ ಸಂಭಾವ್ಯ ಬ್ರೇಕಪ್ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯೂ ದೃಢಪಟ್ಟಿಲ್ಲ.

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.