ತಬಾಹಿ ಹಾಡಿನಲ್ಲಿ ನಾನು ಕಿಸ್ ಕೂಡ ಮಾಡಿಲ್ಲ: ಟಾಕ್ಸಿಕ್ ಸಾಂಗ್ ಟ್ರೋಲ್ ಮಾಡಿದವರಿಗೆ ಯಶ್ ಖಡಕ್ ಉತ್ತರ
ಟಾಕ್ಸಿಕ್ ಚಿತ್ರದ ತಬಾಹಿ ಹಾಡು ಮಾತ್ರ ಬಿಡುಗಡೆಯಾದಾಗಿನಿಂದಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ರಾಮಾಚಾರಿ, ಆ ಹಾಡಿನಲ್ಲಿ ನಾನು ಮುತ್ತು ಕೂಡ ಕೊಟ್ಟಿಲ್ಲ; ಅಶ್ಲೀಲವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜಾಹುಲಿ ಖ್ಯಾತಿಯ ಕಿರಾತಕ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಇದೇ 26ರಂದು ಇಡೀ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಭರ್ಜರಿ ಸದ್ದು ಮಾಡುತ್ತಿದೆ. ಆದ್ರೆ, ಈ ಚಿತ್ರದ ತಬಾಹಿ ಹಾಡು ಮಾತ್ರ ಬಿಡುಗಡೆಯಾದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಈ ಹಾಡಿನಲ್ಲಿರುವ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಆಪ್ತ ದೃಶ್ಯ. ಆದ್ರೆ, ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ರಾಕಿಂಗ್ ಸ್ಟಾರ್ ಯಶ್ ಆ ಹಾಡಿನಲ್ಲಿ ನಾನು ಮುತ್ತು ಕೂಡ ಕೊಟ್ಟಿಲ್ಲ; ಅದು ಅಶ್ಲೀಲವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ತಬಾಹಿ ಕೇಳಿಬಂದ ಟೀಕೆಗಳು ಏನು?
ಟಾಕ್ಸಿಕ್ ಚಿತ್ರದ ತಬಾಹಿ ಹಾಡಿನಲ್ಲಿ ನಾಯಕ-ನಾಯಕಿ ಮಧ್ಯೆ ಅತಿಯಾದ ಆಪ್ತ ದೃಶ್ಯಗಳಿವೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಅದರಲ್ಲೂ, ಮದುವೆಯಾದ ಮೇಲೂ ಇಂತಹ ದೃಶ್ಯಗಳಲ್ಲಿ ನಟಿಸಬೇಕಿತ್ತಾ ಎಂದು ಕೆಲವರು ಪ್ರಶ್ನಿಸಿ ನಟಿ ಕಿಯಾರಾ ಅಡ್ವಾಣಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಇದೆ ವೇಳೆ ಅದೇ ದೃಶ್ಯದಲ್ಲಿದ್ದ ಯಶ್ ಅವರನ್ನು ಹೊಗಳಿ, ಕಿಯಾರಾ ಅವರನ್ನು ಮಾತ್ರ ಟ್ರೋಲ್ ಮಾಡಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಟ್ರೋಲ್‌ಗಳಿಗೆ 'ಸಂತು ಸ್ಟ್ರೇಟ್ ಫಾರ್ವರ್ಡ್' ಉತ್ತರ
ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಾಚಾರಿ ಖ್ಯಾತಿಯ ಯಶ್, "ನಾನು ಆ ಹಾಡಿನಲ್ಲಿ ಕಿಸ್ ಕೂಡ ಮಾಡಿಲ್ಲ; ಜೊತೆಗೆ ಈ ಹಾಡು ಯಾವುದೇ ರೀತಿಯಲ್ಲೂ ಅಶ್ಲೀಲವಾಗಿಲ್ಲ. ಇದು ಸಿನಿಮಾದ ಕಥೆ ಮತ್ತು ಪಾತ್ರಕ್ಕೆ ಬೇಕಾದ ದೃಶ್ಯವಷ್ಟೇ" ಎಂದು ಸಮರ್ಥಿಸಿಕೊಂಡಿದ್ದಾರೆ. ಇದೆ ವೇಳೆ, ಕಿಯಾರಾ ಅಡ್ವಾಣಿ ಮೇಲಿನ ಟ್ರೋಲ್‌ಗಳನ್ನು ಖಂಡಿಸಿದ ಯಶ್, ಅವರು ಒಬ್ಬ ವೃತ್ತಿಪರ ನಟಿ ಎಂದು ಬೆಂಬಲವಾಗಿ ನಿಂತಿದ್ದಾರೆ.

ಆಪ್ ಕಿ ಅದಾಲತ್ನಲ್ಲಿ ರಾಕಿಂಗ್ ಸ್ಟಾರ್ ಯಶ್: 'ಟಾಕ್ಸಿಕ್' ಬಿಡುಗಡೆ ಹೊತ್ತಿನಲ್ಲಿ ಕುತೂಹಲ ಮೂಡಿಸುವ ಸಂದರ್ಶನ

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಯಶ್, ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಕಲ್ಪನೆಗೆ ಕಿಯಾರಾ ತೋರಿದ ಬದ್ಧತೆಯನ್ನು ಶ್ಲಾಘಿಸಿ, ಕಿಯಾರಾ ತುಂಬಾ ಸರಳ ವ್ಯಕ್ತಿತ್ವದವರಾಗಿದ್ದು, ಕಥೆಗೆ ಏನು ಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದರು. ಜೊತೆಗೆ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆಯೂ ಮಾತನಾಡಿದ ಯಶ್,"ನೀವು ಯಾವುದನ್ನು ನಂಬುತ್ತೀರೋ ಅದನ್ನು ಮಾಡಿ, ಜನರು ಅದನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ" ಎಂದು ಕಿಯಾರಾಗೆ ಧೈರ್ಯ ತುಂಬಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



