ಸಿನಿಮಾ ಸುದ್ದಿ

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ; ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

ಟ್ರೈಲರ್ ವೀಕ್ಷಿಸಿದ ನಂತರ ಸಿದ್ಧಾರ್ಥ್, ಕಿಯಾರಾ ಅವರಿಗೆ ವಿಶೇಷ ಸಂದೇಶವನ್ನು ಬರೆದಿದ್ದು, ಅವರ ಅಭಿನಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗಾಗಿ ಕಿಯಾರಾ ಹಾಕಿರುವ ಶ್ರಮ ಮತ್ತು ಅವರಲ್ಲಿರುವ ಉತ್ಸಾಹವನ್ನು ಪ್ರೇಕ್ಷಕರು ಕಾಣಲಿದ್ದಾರೆ ಎಂದೂ ಅವರು ಸುಳಿವು ನೀಡಿದ್ದಾರೆ.

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ; ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!
ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ
Published On :

ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿರುವ ತಬಾಹಿ ಹಾಡು ಸಿನಿ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಇವರಿಬ್ಬರ ಬೋಲ್ಡ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಈ ನಡುವೆ ಟಾಕ್ಸಿಕ್ ಟ್ರೈಲರ್ ಗೆ ಕಿಯಾರಾ ಅಡ್ವಾಣಿ ಅವರ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಫಿದಾ ಆಗಿದ್ದು, ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಬೋಲ್ಡ್ ಅವತಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕಾಗಿ ಕಿಯಾರಾ ಪಟ್ಟ ಶ್ರಮ ಮತ್ತು ಅವರ ಬದ್ಧತೆಯನ್ನು ಶ್ಲಾಘಿಸುತ್ತಾ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಟ್ರೈಲರ್ ವೀಕ್ಷಿಸಿದ ನಂತರ ಸಿದ್ಧಾರ್ಥ್, ಕಿಯಾರಾ ಅವರಿಗೆ ವಿಶೇಷ ಸಂದೇಶವನ್ನು ಬರೆದಿದ್ದು, ಅವರ ಅಭಿನಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗಾಗಿ ಕಿಯಾರಾ ಹಾಕಿರುವ ಶ್ರಮ ಮತ್ತು ಅವರಲ್ಲಿರುವ ಉತ್ಸಾಹವನ್ನು ಪ್ರೇಕ್ಷಕರು ಕಾಣಲಿದ್ದಾರೆ ಎಂದೂ ಅವರು ಸುಳಿವು ನೀಡಿದ್ದಾರೆ.

ಟ್ರೈಲರ್ ಕುರಿತ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದು, ಕಿಯಾರಾ ಅವರ ಕಠಿಣ ಪರಿಶ್ರಮ ಮತ್ತು ಉತ್ಸಾಹ - ಇವೆಲ್ಲವೂ ದೊಡ್ಡ ಪರದೆಯ ಮೇಲೆ ಕಾಣಿಸಲಿದೆ. ಇದು ನಿಮ್ಮ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಲಿದೆ ಕೀ (Ki)!! ಗೀತು ಮೋಹನ್ ದಾಸ್, ಯಶ್ ಹಾಗೂ ಇಡೀ ತಂಡ ಸೃಷ್ಟಿಸಿರುವ ಮ್ಯಾಜಿಕ್ ಅನ್ನು ನೋಡಲು ನಾನು ಕಾತರನಾಗಿದ್ದೇನೆ. #Toxic ತಂಡಕ್ಕೆ ಶುಭಾಶಯಗಳು. ಆಗಸ್ಟ್ 26ಕ್ಕಾಗಿ ಕಾಯುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

Story image

ಕಿಯಾರಾ ಪಾತ್ರದ ಬಗ್ಗೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಸಿದ್ಧಾರ್ಥ್ ಅವರ ಈ ಪ್ರತಿಕ್ರಿಯೆ ಸಹಜವಾಗಿಯೇ ಅಭಿಮಾನಿಗಳ ಗಮನ ಸೆಳೆದಿದೆ. ವಿವಾದದತ್ತ ಗಮನಹರಿಸುವ ಬದಲು, ಸಿದ್ಧಾರ್ಥ್ ಅವರು ಕಿಯಾರಾ ಅವರ ಕೆಲಸ ಮತ್ತು ಬದ್ಧತೆಯನ್ನು ಎತ್ತಿ ತೋರಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.