ಸಿನಿಮಾ ಸುದ್ದಿ

ಭರ್ಜರಿ ಓಪನಿಂಗ್ ಕಂಡರೂ ಬಾಕ್ಸ್ ಆಫೀಸ್‌ನಲ್ಲಿ ಮಂಕಾದ Toxic! ಥಿಯೇಟ್ರಿಕಲ್ ಪ್ರದರ್ಶನ ಮುಕ್ತಾಯಕ್ಕೆ ಮುನ್ನ, 1 ತಿಂಗಳಲ್ಲಿ Yash ಸಿನಿಮಾ ಗಳಿಸಿದ್ದೆಷ್ಟು?

ಆಗಸ್ಟ್ 26ರಂದು ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರವು ಆರಂಭಿಕ ದಿನಗಳಲ್ಲಿ ಭರ್ಜರಿ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿತು. ಹಾಗಾದ್ರೆ, ಟಾಕ್ಸಿಕ್ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ಕುರಿತ ವಿವರ:

ಭರ್ಜರಿ ಓಪನಿಂಗ್ ಕಂಡರೂ ಬಾಕ್ಸ್ ಆಫೀಸ್‌ನಲ್ಲಿ ಮಂಕಾದ Toxic! ಥಿಯೇಟ್ರಿಕಲ್ ಪ್ರದರ್ಶನ ಮುಕ್ತಾಯಕ್ಕೆ ಮುನ್ನ, 1 ತಿಂಗಳಲ್ಲಿ Yash ಸಿನಿಮಾ ಗಳಿಸಿದ್ದೆಷ್ಟು?
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಗಳಿಸಿದ್ದೆಷ್ಟು? — Online Desk
Published On :

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic) ಬಾಕ್ಸ್ ಆಫೀಸ್‌ನಲ್ಲಿ ತನ್ನ ಥಿಯೇಟ್ರಿಕಲ್ ಪ್ರದರ್ಶನವನ್ನು ಮುಕ್ತಾಯಗೊಳಿಸಿದೆ. ಆಗಸ್ಟ್ 26, 2026 ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಆರಂಭಿಕ ದಿನಗಳಲ್ಲಿ ಭರ್ಜರಿ ಗಳಿಕೆ ಕಂಡರೂ, ಮಿಶ್ರ ಪ್ರತಿಕ್ರಿಯೆಗಳ ಕಾರಣದಿಂದ ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿತು. ಹಾಗಾದ್ರೆ, ಟಾಕ್ಸಿಕ್’ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ಕುರಿತ ವಿವರ:

ಟಾಕ್ಸಿಕ್ ಒಟ್ಟು ಕಲೆಕ್ಷನ್ ವಿವರ:

  • ಭಾರತದಲ್ಲಿನ ಒಟ್ಟು ನೆಟ್ ಕಲೆಕ್ಷನ್: ₹250.06 ಕೋಟಿ

  • ಭಾರತದಲ್ಲಿನ ಒಟ್ಟು ಗ್ರಾಸ್ ಕಲೆಕ್ಷನ್: ₹298.41 ಕೋಟಿ

  • ವಿದೇಶಿ ಮಾರುಕಟ್ಟೆ ಗಳಿಕೆ: ₹43.75 ಕೋಟಿ

  • ವಿಶ್ವದಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್: ₹342.16 ಕೋಟಿ 

ಭಾಷಾವಾರು ಕಲೆಕ್ಷನ್:

  • ಹಿಂದಿ ಆವೃತ್ತಿ: ₹137.00 ಕೋಟಿ

  • ಕನ್ನಡ ಆವೃತ್ತಿ: ₹62.50 ಕೋಟಿ

  • ತೆಲುಗು ಆವೃತ್ತಿ: ₹36.80 ಕೋಟಿ

  • ತಮಿಳು ಆವೃತ್ತಿ: ₹11.20 ಕೋಟಿ

  • ಮಲಯಾಳಂ ಆವೃತ್ತಿ: ₹2.56 ಕೋಟಿ

ಹಾಗಾದ್ರೆ, ಕಲೆಕ್ಷನ್ ಕಡಿಮೆಯಾಗಲು ಕಾರಣವೇನು?

ಚಿತ್ರ ಬಿಡುಗಡೆಯಾದ ಮೊದಲ ದಿನ ವಿಶ್ವಾದ್ಯಂತ ₹140 ಕೋಟಿ ಗ್ರಾಸ್ (ಭಾರತದಲ್ಲಿ ₹101.10 ಕೋಟಿ ನೆಟ್) ಗಳಿಸುವ ಮೂಲಕ ಅತ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಅದರಲ್ಲೂ, 2026ನೇ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 5 ಭಾರತೀಯ ಸಿನಿಮಾಗಳ ಪಟ್ಟಿಗೆ ಟಾಕ್ಸಿಕ್ ಚಿತ್ರ ಸೇರಿದೆಯಾದರೂ, ಚಿತ್ರಕ್ಕೆ ಸಿಕ್ಕ ನೆಗೆಟಿವ್ ರಿವ್ಯೂಗಳು ಹಾಗೂ ಭಾರಿ ಬಜೆಟ್‌ಗೆ ಹೋಲಿಸಿದರೆ ಥಿಯೇಟ್ರಿಕಲ್ ರನ್‌ನಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.