Toxic: ಯಶ್ ಅಭಿನಯದ 'ಟಾಕ್ಸಿಕ್'ಗೆ ಸಿಕ್ತು 'A' ಸರ್ಟಿಫಿಕೇಟ್; ರನ್‌ಟೈಮ್ ಕೇಳಿದ್ರೆ ಥ್ರಿಲ್ ಆಗ್ತೀರಾ!
ಬಿಡುಗಡೆಯ ಹಂತದಲ್ಲಿರುವ, ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ʻA’ (ವಯಸ್ಕರಿಗೆ ಮಾತ್ರ) ಸರ್ಟಿಫಿಕೇಟ್ ನೀಡಿದೆ.

ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
ಬಿಡುಗಡೆಯ ಹಂತದಲ್ಲಿರುವ, ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ʻA’ (ವಯಸ್ಕರಿಗೆ ಮಾತ್ರ) ಸರ್ಟಿಫಿಕೇಟ್ ನೀಡಿದೆ. ಇದರೊಂದಿಗೆ ಬೋಲ್ಡ್ ಕಂಟೆಂಟ್ ಹೊಂದಿರುವ ಸಿನಿಮಾಗೆ ಸೆನ್ಸಾರ್ ಮಂಡಳಿ ಯಾವ ಪ್ರಮಾಣಪತ್ರ ನೀಡಬಹುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಸಿನಿಮಾದ ರನ್‌ಟೈಮ್ ಎಷ್ಟು ಗೊತ್ತಾ?
A ಸರ್ಟಿಫಿಕೇಟ್ ಮತ್ತೊಂದು ಅಂಶವನ್ನು ಬಹಿರಂಗಪಡಿಸಿದ್ದು, ಟಾಕ್ಸಿಕ್ ಸುಮಾರು 3 ಗಂಟೆ 14 ನಿಮಿಷಗಳ ಕಾಲ ರನ್ ಆಗುತ್ತದೆ.
ಈ ಸಿನಿಮಾವು ಒಟ್ಟು 194 ನಿಮಿಷಗಳಷ್ಟು ದೀರ್ಘಾವಧಿಯನ್ನ ಹೊಂದಿದ್ದು, ಕಥೆ ಮತ್ತು ಪಾತ್ರಗಳ ಆಳವಾದ ಚಿತ್ರಣಕ್ಕೆ ಆದ್ಯತೆ ನೀಡಲಾಗಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಹಾಗೂ ʻರಾʼ ಶೈಲಿಯ ಕಥಾವಸ್ತು ಇರೋದ್ರಿಂದ ಸೆನ್ಸಾರ್ ಮಂಡಳಿಯು ʻಎʼ ಪ್ರಮಾಣಪತ್ರವನ್ನ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



