ಕೌನ್ ಬನೇಗಾ ಕರೋಡ್ಪತಿ KBC18: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶ್ನೆ ಕೇಳಿದ ಅಮಿತಾಬ್ ಬಚ್ಚನ್; Video ವೈರಲ್!
ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸೀಸನ್ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ಅಮಿತಾಬ್ ಬಚ್ಚನ್ ಅವರ ಜನಪ್ರಿಯ 'ಕೌನ್ ಬನೇಗಾ ಕರೋಡ್ಪತಿ (KBC) ಕಾರ್ಯಕ್ರಮದ ಇತ್ತೀಚಿನ ಸೀಸನ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಶೇಷವಾಗಿ ಕನ್ನಡದ ಹೆಮ್ಮೆಯ ಸೂಪರ್‌ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' (Toxic) ಬಿಡುಗಡೆಗೆ ಮುನ್ನವೇ ಅವರನ್ನು ಕುರಿತಾದ ಒಂದು ಪ್ರಶ್ನೆಯನ್ನು ಕೇಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಕಿಂಗ್ ಸ್ಟಾರ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಹೊಸ ಸೀಸನ್ ವೀಕ್ಷಕರ ನಡುವೆ ಸಾಕಷ್ಟು ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.
ಆಗಸ್ಟ್ 10 ರಂದು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ, ಬಚ್ಚನ್ ಅವರು ಸ್ಪರ್ಧಿಗಳಿಗೆ ಸವಾಲಿನ ಪ್ರಶ್ನೆಗಳನ್ನು ಕೇಳುತ್ತಾ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ. ಇದೀಗ ಈ ರಸಪ್ರಶ್ನೆ ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.
ಯಶ್ ಕುರಿತಾದ KBC 18ರ ಪ್ರಶ್ನೆ ವೈರಲ್: ವೈರಲ್ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್ ಅವರು ಸ್ಪರ್ಧಿಯೊಬ್ಬರಿಗೆ 20,000 ರೂ. ಮೌಲ್ಯದ ಪ್ರಶ್ನೆಯೊಂದನ್ನು ಕೇಳುತ್ತಾರೆ. ರಜನಿಕಾಂತ್ 'ಸೂಪರ್' Super ಸ್ಟಾರ್ ಆಗಿದ್ದರೆ, ಚಿರಂಜೀವಿ 'ಮೆಗಾ' ಸ್ಟಾರ್, ಮತ್ತು ಪವನ್ ಕಲ್ಯಾಣ್ 'ಪವರ್' (Power) ಆಗಿದ್ದರೆ, ಯಶ್ ಏನಾಗಿದ್ದಾರೆ? ಎಂಬ ಪ್ರಶ್ನೆ ಇದಾಗಿದೆ.
ತದನಂತರ ಸ್ಪರ್ಧಿ ರಾಕಿಂಗ್ ಸ್ಟರ್ ಯಶ್ ಎಂದು ಸರಿಯಾದ ಉತ್ತರ ನೀಡುವ ಮೂಲಕ ಬಹುಮಾನ ಗೆದ್ದಿದ್ದಾರೆ. ಇದು ಆನ್ ಲೈನ್ ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ದಕ್ಷಿಣ ಭಾರತದ ಕೆಲವು ಅತ್ಯುನ್ನತ ಸ್ಟಾರ್ ಗಳೊಂದಿಗೆ ಕನ್ನಡದ ಸ್ಟಾರ್ ಬೆಳವಣಿಗೆ ಬಗ್ಗೆ ಅವರ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



