'ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ': 'ಟಾಕ್ಸಿಕ್' ಟ್ರೇಲರ್ ಕುರಿತು Rishika Singh ಆಕ್ರೋಶ; ಯಶ್ ಅಭಿಮಾನಿಗಳ ಅಸಮಾಧಾನ! Video
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿರುವ ನಡುವೆಯೇ, ಚಿತ್ರದ ಟ್ರೇಲರ್ ಕುರಿತು ನಟಿ ರಿಷಿಕಾ ಸಿಂಗ್ ಮಾಡಿರುವ ಟೀಕೆ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಅಭಿಮಾನಿಗಳಲ್ಲಿ ವ್ಯಾಪಕ ನಿರೀಕ್ಷೆ ಹುಟ್ಟಿಸಿದ್ದು, ಟ್ರೈಲರ್ ನಲ್ಲಿನ ಕೆಲ ದೃಶ್ಯಗಳು ವ್ಯಾಪಕ ಚರ್ಚೆಗೆ ಕಾರಣವಾಗಿರುವಂತೆಯೇ ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.
ಹೌದು.. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿರುವ ನಡುವೆಯೇ, ಚಿತ್ರದ ಟ್ರೇಲರ್ ಕುರಿತು ಕನ್ನಡ ನಟಿ ರಿಷಿಕಾ ಸಿಂಗ್ ಮಾಡಿರುವ ಟೀಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಸಹ ನಗ್ನವಾಗಿ ಕಾಣಿಸಿಕೊಂಡಿರುವ ದೃಶ್ಯ ಟ್ರೇಲರ್‌ನಲ್ಲಿ ಸ್ಪಷ್ಟವಾಗಿದೆ. ಇದನ್ನೆಲ್ಲಾ ನೋಡಿರುವ ಕನ್ನಡದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ತಮ್ಮದೇ ಧಾಟಿಯಲ್ಲಿ ಲೇವಡಿ ಮಾಡಿದ್ದಾರೆ. 'ಐ ಆಮ್ ಟಾಕ್ಸಿಕ್' ಅಂತ ರಿಷಿಕಾ ಸಿಂಗ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಿಷಿಕಾ ಸಿಂಗ್ ಹೇಳಿದ್ದೇನು?
''ಹೆಣ್ಮಕ್ಳಿಗೆ ಅಂದ ಇದ್ರೆ ಚಂದ.. ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ.. ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ.. ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್ಗಳ ಜೊತೆ ನಿನ್ನ ಚಕ್ಕಂದ ಕಂದ.. ನಂಗೆ ಇಷ್ಟ ಆಗ್ಲಿಲ್ಲ ನಿನ್ನ ಹೊಸ ಗಂಧ. ನಿಂಗೂ ಹೆಣ್ಣು ಮಗಳು ಇದ್ದಾಳೆ, ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ? ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ‘ಟಾಕ್ಸಿಕ್'' ಎಂದು ರಿಷಿಕಾ ಸಿಂಗ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಯಶ್ ಅಭಿಮಾನಿಗಳ ಆಕ್ರೋಶ
ಇನ್ನು ರಿಷಿಕಾ ಸಿಂಗ್ ಟೀಕೆಗಳಿಗೆ ಯಶ್ ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ‘ಟಾಕ್ಸಿಕ್’ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದು ಕುಳಿತಿದ್ದಾರೆ. ಹೀಗಾಗಿ ಚಿತ್ರದ ಟ್ರೇಲರ್ ಬಗ್ಗೆ ಬಂದ ಟೀಕೆ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಿಷಿಕಾ ಸಿಂಗ್ ವಿರುದ್ಧ ಕೆಲವರು ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದು ವರ್ಗ ನಟಿಯ ಸಿನಿಮಾ ಕುರಿತ ವೈಯಕ್ತಿಕ ಅಭಿಪ್ರಾಯವನ್ನು ಗೌರವಿಸಬೇಕು ಎಂದು ಹೇಳಿದೆ.
ಈ ಹಿಂದೆ ರಿಷಿಕಾ ನಟಿಸಿದ್ದ ಕೆಲ ತುಣುಕುಗಳು, ಬಿಕಿನಿ ಫೋಟೋ ಮುಂತಾದವುಗಳನ್ನ ಹಂಚಿಕೊಂಡು 'ಇದು ಸಂಸ್ಕಾರವೇ?' ಎಂದು ಯಶ್ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ರಿಷಿಕಾರನ್ನ ಯಶ್ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ''ಜೊತೆಯಲ್ಲಿ ನಟಿಸಿದ ನಟಿಯರಿಗೇ ಪ್ರಾಬ್ಲಂ ಇಲ್ಲ. ಇವರಿಗೇಕೆ?'', ''ಯಶ್ ಜೊತೆ ನಟಿಸಿದ್ದು ಖುಷಿಯಾಗಿದೆ ಅಂತ ನಟಿಯರೇ ವೇದಿಕೆ ಮೇಲೆ ಬಂದು ಹೇಳಿದ್ದಾರೆ. ಅಂದ್ಮೇಲೆ ಇವರಿಗ್ಯಾಕೆ ಸಮಸ್ಯೆ?'', ''ಸಂಭಾವನೆ ಪಡೆದು ಒಪ್ಪಂದದ ಪ್ರಕಾರವೇ ಅಭಿನಯ ಮಾಡಿದ್ದಾರೆ ಅಂದ್ಮೇಲೆ ಈ ಪ್ರಶ್ನೆಗಳು ಯಾಕೆ?'' ಎಂದು ರಿಷಿಕಾ ಮೇಲೆ ಯಶ್ ಫ್ಯಾನ್ಸ್ ಪ್ರಶ್ನೆಗಳ ಬಾಣವನ್ನ ಸುರಿಸುತ್ತಿದ್ದಾರೆ.
ಯಾರು ರಿಷಿಕಾ ಸಿಂಗ್?
ರಿಷಿಕಾ ಸಿಂಗ್ ಅವರು ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾಗಿದ್ದು, ‘ಕಳ್ಳ ಮಳ್ಳ ಸುಳ್ಳ’, ‘ಕಂಠೀರವ’ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನವೂ ರಿಷಿಕಾ ಸಿಂಗ್ ಅವರ ನೇರ ಹಾಗೂ ವಿವಾದಾತ್ಮಕ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದ್ದವು. 2013ರಲ್ಲಿ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿದ್ದ ವೇಳೆ ಯಕ್ಷಗಾನದ ಕುರಿತು ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




